ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಹೆಬ್ಬೆ ಜಲಪಾತ

ಪುನರ್ವಸು ಮಳೆಯಿಂದ ಧುಮ್ಮಿಕ್ಕುತ್ತಿರುವ ಹೆಬ್ಬೆ ಜಲಪಾತದ ನಯನ ಮನೋಹರ ದೃಶ್ಯ.
ಪುನರ್ವಸು ಮಳೆಯಿಂದ ಧುಮ್ಮಿಕ್ಕುತ್ತಿರುವ ಹೆಬ್ಬೆ ಜಲಪಾತದ ನಯನ ಮನೋಹರ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಭೀಮನಹಳ್ಳ ಜಲಪಾತ
  • ಹೆಬ್ಬೆ ಜಲಪಾತ
ಲಿಂಗದಹಳ್ಳಿ: ಜೂನ್‌ವರೆಗೂ ಮಳೆ ಬಾರದೆ ಸೊರಗಿದ್ದ ಹೆಬ್ಬೆ ಜಲಪಾತ ಪುನರ್ವಸು ಮಳೆಯ ಅಬ್ಬರಕ್ಕೆ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. 
ಕೆಲ ದಿನಗಳಿಂದ ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ಭಾಗದ ಗಿರಿ ಶ್ರೇಣಿಗಳ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಲ್ಲತ್ತಿಗಿರಿ, ಶಾಂತಿಾಲ್ಸ್, ಭೀಮನಹಳ್ಳ ಜಲಪಾತ ಮತ್ತು ಹೆಬ್ಬೆ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾದಂತಾಗಿದೆ. ಜಲಪಾತಗಳ ಸೊಬಗನ್ನು ವೀಕ್ಷಿಸಲು ವಿವಿಧ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಹೆಬ್ಬೆ ಜಲಪಾತದ ರುದ್ರ ರಮಣೀಯ ದೃಶ್ಯ ನೋಡುತ್ತ ಸಂಭ್ರಮಿಸುತ್ತಿದ್ದಾರೆ. 
ಹೆಬ್ಬೆ ಜಲಪಾತ ವೀಕ್ಷಿಸುವ ಸಲುವಾಗಿ ಬರುವ ಪ್ರವಾಸಿಗರು ಜಲಪಾತದ ಸಮೀಪಕ್ಕೆ ಹೋಗದೆ ಸುರಕ್ಷಿತ ಪ್ರದೇಶದವರೆಗಷ್ಟೇ ತೆರಳಿ ಜಲಪಾತದ ವೈಭವ ನೋಡಬೇಕು. ಜಲಪಾತದ ಬಳಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ನೀರಿನ ತೇವಾಂಶದಿಂದಾಗಿ ಜಲಪಾತದ ಬಳಿಯಲ್ಲಿರುವ ಕಲ್ಲುಬಂಡೆಗಳಲ್ಲಿ ಪಾಚಿ ಕಟ್ಟಿದಂತಾಗಿದ್ದು, ಕಾಲು ಜಾರಿ ನೀರಿಗೆ  ಬೀಳುವ ಸಂಭವವಿದೆ. ಪ್ರವಾಸಿಗರು ಸುರಕ್ಷೆ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದೂರದ ಸುರಕ್ಷಿತ ಸ್ಥಳದಿಂದಷ್ಟೇ ಜಲಪಾತ ವೀಕ್ಷಿಸಬೇಕು ಎಂದು ತಣಿಗಬೈಲು ಭದ್ರಾ ವನ್ಯಜೀವಿ ವಿಭಾಗ  ವಲಯಾರಣ್ಯಾಧಿಕಾರಿ ಬಿ.ಸುಧಾಕರ್ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net