ಪಂದ್ಯಾವಳಿಯಲ್ಲಿ ಹೊಸನಗರ ತಂಡ ಪ್ರಥಮ ಸ್ಥಾನ ಪಡೆಯಿತು. ಹೊಕ್ಕಳಿಕೆ ತಂಡ ದ್ವಿತೀಯ ಸ್ಥಾನ ಪಡೆಯಿತು. ವಿವಿಧ ಜಿಲ್ಲೆಗಳ ಒಟ್ಟು 13 ತಂಡಗಳು ಭಾಗವಹಿಸಿದ್ದವು. ಗೆದ್ದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ, ಎನ್.ಆರ್.ಪುರ ಘಟಕದ ಅಧ್ಯಕ್ಷ ಎ.ವಿ.ಪ್ರಶಾಂತ್, ವೈ.ಎಸ್.ಸುಬ್ರಮಣ್ಯ, ಕೆ.ವಿ.ಪ್ರಭಾಕರ್, ಎ.ಎಸ್.ವೆಂಕಟರಮಣ ಉಪಸ್ಥಿತರಿದ್ದರು.