ಹಳಿಯೂರು ಬಸ್ ತಂಗುದಾಣ ದುರಸ್ತಿ ಪಡಿಸಿ

 ಹಳಿಯೂರು ಬಸ್‌ನಿಲ್ದಾಣ ದುರಸ್ತಿ ಹಾಗೂ ಬಯಲು ಬಸವೇಶ್ವರ ಸ್ವಾಮಿ ದೇಗುಲಕ್ಕೆ ಚರಂಡಿ ನೀರು ಹರಿವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ರೈತ ಸಂಘದ ತಾಲೂಕು ಘಟಕ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ತಾಹೀರಾ ತಸ್ನಿಮ್‌ಗೆ ಮನವಿ ಸಲ್ಲಿಸಿದರು.
ಹಳಿಯೂರು ಬಸ್‌ನಿಲ್ದಾಣ ದುರಸ್ತಿ ಹಾಗೂ ಬಯಲು ಬಸವೇಶ್ವರ ಸ್ವಾಮಿ ದೇಗುಲಕ್ಕೆ ಚರಂಡಿ ನೀರು ಹರಿವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ರೈತ ಸಂಘದ ತಾಲೂಕು ಘಟಕ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ತಾಹೀರಾ ತಸ್ನಿಮ್‌ಗೆ ಮನವಿ ಸಲ್ಲಿಸಿದರು.
Published on
ತರೀಕೆರೆ: ಅಪಾಯದ ಹಂತದಲ್ಲಿರುವ ಪಟ್ಟಣ ಹೊರ ವಲಯದ ಹಳಿಯೂರು ಬಸ್‌ತಂಗುದಾಣ ದುರಸ್ತಿ ಪಡಿಸಬೇಕು ಹಾಗೂ ಪಾಳೇಗಾರರ ಕ್ಯಾಂಪ್ ಸಮೀಪದ ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇಗುಲಕ್ಕೆ ಚರಂಡಿ ನೀರು ಹರಿಯುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ರೈತ ಸಂಘದ ತಾಲೂಕು ಘಟಕ ಪದಾಧಿಕಾರಿಗಳು ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ತಾಹೀರಾ ತಸ್ನಿಮ್‌ಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಪ್ರಮುಖ ಎಚ್.ಸೋಮಶೇಖರಯ್ಯ ಮಾತನಾಡಿ, ಬಿ.ಎಚ್.ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇಗುಲ ಪಕ್ಕದ ಚರಂಡಿ ಮುಚ್ಚಿದೆ. ಇದರಿಂದ ಮಳೆ ಸುರಿದಾಗ ಚರಂಡಿ ಮೂಲಕ ಹರಿಯುವ ನೀರು ದೇಗುಲ ಪ್ರವೇಶಿಸುವ ಆತಂಕ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಳಿಯೂರು ಗೇಟ್ ಸಮೀಪದಲ್ಲಿ ಕಬ್ಬಿಣದ ಪರಿಕರ ಬಳಸಿ ನಿರ್ಮಿಸಿರುವ ತಂಗುದಾಣ ತುಕ್ಕು ಹಿಡಿದು ಬೀಳುವ ಸ್ಥಿತಿ ತಲುಪಿದೆ. ಈ ಬಸ್‌ನಿಲ್ದಾಣದಲ್ಲಿ ನಿಲ್ಲುವ ಶಾಲಾ ಕಾಲೇಜಿಗೆ ತೆರಳುವ ಮಕ್ಕಳ ಜತೆ ಜನ ಸಾಮಾನ್ಯರು ಜೀವ ಭಯದಲ್ಲಿ ನಿಲ್ಲುವಂತಾಗಿದೆ. ಪುರಸಭೆ ತಕ್ಷಣ ಈ ಸಮಸ್ಯೆಗಳನ್ನು ಪರಿಹರಿಸಬೇಕು ಇಲ್ಲವಾದಲ್ಲಿ ಪುರಸಭೆ ಎದುರು ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಂ.ಓಂಕಾರಪ್ಪ, ಟಿ.ಎಂ.ಉಮಾಶಂಕರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net