ಗೃಹಲಕ್ಷ್ಮಿ ಯೋಜನೆ ಅಬಾಧಿತ

ಎನ್.ಆರ್.ಪುರ ಸಿಂಸೆಯಲ್ಲಿ ಗೃಹಲಕ್ಷ್ಮಿ ಯೋಜನೆ ಮೂರನೇ ವರ್ಷಾಚರಣೆ ಕಾರ್ಯಕ್ರಮವನ್ನು ಸಾವಿತ್ರಮ್ಮ, ಕೆ.ವಿ.ಸಾಜು, ನಿತ್ಯಾನಂದ ಉದ್ಘಾಟಿಸಿದರು. ರಘು, ಜುಬೇದಾ, ವಸಂತಕುಮಾರ್, ಸಾವಿತ್ರಮ್ಮ ಇತರರಿದ್ದರು.
ಎನ್.ಆರ್.ಪುರ ಸಿಂಸೆಯಲ್ಲಿ ಗೃಹಲಕ್ಷ್ಮಿ ಯೋಜನೆ ಮೂರನೇ ವರ್ಷಾಚರಣೆ ಕಾರ್ಯಕ್ರಮವನ್ನು ಸಾವಿತ್ರಮ್ಮ, ಕೆ.ವಿ.ಸಾಜು, ನಿತ್ಯಾನಂದ ಉದ್ಘಾಟಿಸಿದರು. ರಘು, ಜುಬೇದಾ, ವಸಂತಕುಮಾರ್, ಸಾವಿತ್ರಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಜನೆ ಸಂಭ್ರಮಾಚರಣೆ
  • ಗಿಡ ನೆಡುವ
ಎನ್.ಆರ್.ಪುರ: ವಿಪಕ್ಷಗಳು ಪಂಚ ಗ್ಯಾರಂಟಿ ವಿರುದ್ಧ ಅಪಪ್ರಚಾರ, ಲೇವಡಿ ಮಾಡಿದರೂ ಯೋಜನೆಗಳು ಯಶಸ್ವಿಯಾಗಿ ಮೂರು ವರ್ಷ ಪೂರ್ಣಗೊಳಿಸಿವೆ ಎಂದು ಕೆಡಿಪಿ ಸದಸ್ಯ ಕೆ.ವಿ.ಸಾಜು ತಿಳಿಸಿದರು.
ಸಿಂಸೆ ಭೋವಿ ಕಾಲನಿ ಅಂಗನವಾಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ  ಯೋಜನೆ ಸಂಭ್ರಮಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಗ್ಯಾರಂಟಿ ಯೋಜನೆಯನ್ನು ಸರ್ಕಾರ ಮುಂದುವರಿಸಲಿದೆ. ಯಾರೂ ಅಪಪ್ರಚಾರ ನಂಬಬಾರದು. ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಬೇರೆ ರಾಜ್ಯಗಳೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿವೆ. ಗೃಹಲಕ್ಷ್ಮಿ ಯೋಜನೆಯಿಂದ 2 ಸಾವಿರ ರೂಪಾಯಿ ಪಡೆದ ಮಹಿಳೆಯರು ಆರೋಗ್ಯ, ಶಿಕ್ಷಣಕ್ಕಾಗಿ ಬಳಸುತ್ತಿದ್ದಾರೆ. ಕೆಲವರು ಗೃಹಲಕ್ಷ್ಮಿ ಹಣ ಬಳಸಿ ಅಂಗಡಿ ತೆರೆದು ಉದ್ಯೋಗ ಆರಂಭಿಸಿದ್ದಾರೆ. ಕೃಷಿಗೆ ನೀರಾವರಿ ಮಾಡಲು ಬೋರ್‌ವೆಲ್ ಕೊರೆದಿದ್ದಾರೆ ಎಂದರು.
ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಸಾವಿತ್ರಮ್ಮ ಮಾತನಾಡಿ, ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 16,129 ಫಲಾನುಭವಿಗಳು ನೋಂದಾಯಿಸಿದ್ದರು. ಇವರಲ್ಲಿ ಏಪ್ರಿಲ್‌ನಲ್ಲಿ 9,882 ಫಲಾನುಭವಿಗಳಿಗೆ 1.97 ಕೋಟಿ ರೂ.ಗೂ ಹೆಚ್ಚು ಹಣ ಪಾವತಿ ಮಾಡಲಾಗಿದೆ. ಶೇ.50ರಷ್ಟು ಫಲಾನುಭವಿಗಳಿಗೆ ಹಣ ಬಂದಿದೆ. ಫೆಬ್ರವರಿವರೆಗೆ ಎಲ್ಲ ಫಲಾನುಭವಿಗಳಿಗೆ ಹಣ ಸಿಕ್ಕಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗೃಹಲಕ್ಷ್ಮಿ ಯೋಜನೆಯ ದಾಖಲಾತಿ ಪರಿಶೀಲನೆಗಾಗಿ ಮುಂದಿನ ದಿನಗಳಲ್ಲಿ ಮನೆಗಳಿಗೆ ಬರಲಿದ್ದು ಫಲಾನುಭವಿಗಳು ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದರು. 
ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜುಬೇದಾ ಮಾತನಾಡಿ, ಮುಂದಿನ 2 ವರ್ಷವೂ ಗೃಹಲಕ್ಷ್ಮಿ  ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ. ನೀಡುತ್ತೇವೆ. ಮುಂದಿನ ಅವಧಿಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಅಂಗನವಾಡಿ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಇಂದಿರಾನಗರ ರಘು. ನಿತ್ಯಾನಂದ, ಗುಬ್ಬಿಗಾ ಗ್ರಾಪಂ ಮಾಜಿ ಅಧ್ಯಕ್ಷೆ ನಾಗರತ್ನಾ, ಮಾಜಿ ಸದಸ್ಯ ವಸಂತಕುಮಾರ್, ವೆಲ್ಫೇರ್ ಸೊಸೈಟಿ ಮಹಿಳಾ ಸಾಂತ್ವನ ಕೇಂದ್ರದ ನಿರ್ದೇಶಕಿ ಸಿನಿ, ಸಿಡಿಪಿಒ ಇಲಾಖೆಯ ರಮ್ಯಾ, ರಮಾ, ರತ್ನಮ್ಮ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net