ನಗರದ ಬಸವನಹಳ್ಳಿಯ ತಾಲೂಕು ಕಚೇರಿ ಸಮೀಪ ನಗರಸಭೆ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ಫುಡ್‌ಕೋರ್ಟ್ಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಫುಡ್‌ಕೋರ್ಟ್ನಲ್ಲಿ ವ್ಯಾಪಾರ ನಡೆಸುವವರು ಬಹುತೇಕ ಬಡ ವ್ಯಾಪಾರಿಗಳಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗದAತೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಕಾಮಗಾರಿಯನ್ನು ನಗರಸಭೆ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಸಿದ್ಧಪಡಿಸಿರುವ ಅಂದಾಜಿನAತೆ ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ಹೇಳಿದರು.