ಅಂದು ಬೆಳಗ್ಗೆ 8 ಗಂಟೆಗೆ ಕುರುವಂಗಿ ಗ್ರಾಮದ ಸಗನಿಪುರದಲ್ಲಿ ಆರಂಭವಾಗುವ ಸ್ಪರ್ಧೆಯಲ್ಲಿ ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮ ವಲಯಗಳಿಂದ ಅರ್ಹತೆ ಪಡೆದ ದೇಶದ ಪ್ರಮುಖ ಆಟೋಕ್ರಾಸ್ ಚಾಲಕರು ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಸಲಿದ್ದಾರೆ. ಸುಮಾರು 30 ಸ್ಪರ್ಧಿಗಳು ವಿವಿಧ ವರ್ಗಗಳಲ್ಲಿ ಪಾಲ್ಗೊಳ್ಳುವರು. ದೆಹಲಿಯ ಫಿಲಿಪೋಸ್ ಮತಾಯಿ ಮತ್ತು ಅರ್ನವ್ ಪ್ರತಾಪ್‌ಸಿಂಗ್, ಬೆಂಗಳೂರಿನ ಚೇತನ್‌ರಾಮ್, ಮೈಸೂರಿನ ರಕ್ಷಿತ್ ಐವರ್ ಮತ್ತು ಸಯ್ಯದ್ ಸಲ್ಮಾನ್, ಗೋವಾದ ವೈಭವ್ ಮರಾಠೆ, ನಾಗಲ್ಯಾಂಡ್‌ನ ಬಾಬಿತ್‌ಲಿಂಗ್ದೋಹ್, ಬಾಂಬೆಯ ಕುಶಾಲ್ ಚೌಧರಿ, ತ್ರಿಶೂರ್‌ನ ಅಲೆಕ್ಸ್ ಕುರುವಿಳ, ಚಿಕ್ಕಮಗಳೂರಿನ ಐಮನ್‌ಅಹ್ಮದ್, ಸಿ.ಪಿ.ಗೌತಮ್, ಅಸದ್ ಪಾಷಾ, ಮಹಿಳಾ ವಿಭಾಗದಲ್ಲಿ ತರುಷಿ ವಿಕ್ರಮ್, ಶಿವಾನಿ ಪೃಥ್ವಿ, ಶ್ರೀಜಿತ್‌ಶೋಮ್, ಶಮೀನಾ, ಪ್ರಾಚಿ ಗಾಯಕ್ವಾಡ್ ಮತ್ತು ಪಲ್ಲವಿಯಾದವ್ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.