ಸರ್ಕಾರದ ಭೂ ಸುರಕ್ಷಾ ಯೋಜನೆಗೆ ಗ್ರಹಣ

ಬೀರೂರು ನಾಡಕಚೇರಿಯಲ್ಲಿ ದಾಖಲೆಗಳಿಗಾಗಿ ಬಂದ ರೈತ ವಾಪಾಸಾಗುತ್ತಿರುವುದು.
ಬೀರೂರು ನಾಡಕಚೇರಿಯಲ್ಲಿ ದಾಖಲೆಗಳಿಗಾಗಿ ಬಂದ ರೈತ ವಾಪಾಸಾಗುತ್ತಿರುವುದು.
Published on
ಬೀರೂರು: ರೈತರಿಗೆ ಅಗತ್ಯವಿರುವ ಕಡತಗಳ ಹಳೇ ಪಹಣಿ, ಮ್ಯುಟೇಶನ್, ಇಂಡೆಕ್ಸ್, ಸಾಗುವಳಿ ಪತ್ರ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಪಡೆಯಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಬೆಳೆ, ಅಭಿವೃದ್ಧಿ ಸಾಲ ಸೌಲಭ್ಯಗಳು ದೊರೆಯದಂತಾಗಿದೆ.
ಸರ್ಕಾರ ಭೌತಿಕ ಫೈಲ್‌ಗಳ ಸ್ಕ್ಯಾನ್ ಮಾಡಿದ ನಕಲುಗಳನ್ನು ಪಿಡಿಎಫ್ ಸ್ವರೂಪದಲ್ಲಿ ಡಿಜಿಟಲ್ ದಾಖಲೆಗಳಾಗಿ ಅಫ್‌ಲೋಡ್ ಮಾಡಿ ಅವುಗಳನ್ನು ಇಂಟರ್ನೆಟ್ ಮೂಲಕ ಒಂದೇ ಪೋರ್ಟಲ್‌ನಿಂದ ಸರ್ಕಾರಿ ಬಳಕೆದಾರರಿಗೆ ಸುಲಭವಾಗಿ ಹುಡುಕಲು ಹಾಗೂ ಮರು ಪಡೆಯಲು ಅನುಕೂಲವಾಗುವಂತೆ ಭೂ ಸುರಕ್ಷಾ ಆಧುನಿಕ ಅಭಿಲೇಖಾಲಯ ಪೋರ್ಟಲ್ ಮತ್ತು ಸೇವಾ ಸಿಂಧುನಂತಹ ಇತರ ಸೇವಾ ವಿತರಣಾ ವೇದಿಕೆಗಳ ಮೂಲಕ ನೇರವಾಗಿ ನಾಗರಿಕರಿಗೆ ಎಲೆಕ್ಟ್ರಾನಿಕ್ ದಾಖಲೆಗಳ ವಿತರಣೆಯನ್ನು ಸುಲಭಗೊಳಿಸಲಾಗಿದೆ.
ಭೂ ದಾಖಲೆಗಳ ಸುರಕ್ಷತೆ, ಸಂರಕ್ಷಣೆ ಹಾಗೂ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಆದರೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಪೋರ್ಟಲ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ರೈತರನ್ನು ಅಲೆದಾಡಿಸುವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net