ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರ್ಕಾರದ ಶ್ರಮ

ಶೃಂಗೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲಾನುಭವಿಗಳಿಗೆ ಶಾಸಕ ಟಿ.ಡಿ.ರಾಜೇಗೌಡ ಕಿಟ್ ವಿತರಿಸಿದರು.
ಶೃಂಗೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲಾನುಭವಿಗಳಿಗೆ ಶಾಸಕ ಟಿ.ಡಿ.ರಾಜೇಗೌಡ ಕಿಟ್ ವಿತರಿಸಿದರು.
Published on
ಶೃಂಗೇರಿ: ಕಾರ್ಮಿಕರು ಸರ್ಕಾರ ನೀಡುವ ಸವಲತ್ತು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದಢರಾಗಬೇಕು. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅರ್ಹ ಲಾನುಭವಿಗಳಿಗೆ ಕಾರ್ಮಿಕ ಕಿಟ್ ವಿತರಿಸಿ ಮಾತನಾಡಿ, ಶ್ರಮ ಜೀವಿಗಳಾದ ಕಾರ್ಮಿಕರು ದಿನಪೂರ್ತಿ ಕೆಲಸ ಮಾಡುತ್ತಾರೆ. ಇಂದಿನ ದುಬಾರಿ ಜೀವನಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ವೆಚ್ಚವಿದ್ದು, ಸರ್ಕಾರ ಕಾರ್ಮಿಕರಿಗೆ ಅವರ ಕೆಲಸಕ್ಕೆ ಪೂರಕವಾಗಿ ಕಿಟ್ ನೀಡುತ್ತಿದೆ. ಗಾರೆ ಕೆಲಸದವರು, ಮರಗೆಲಸ, ವೆಲ್ಡಿಂಗ್ ಮುಂತಾದ ಕೆಲಸ ಮಾಡುವ ಕಾರ್ಮಿಕರಿಗೆ ನೆರವಾಗುವ ಕಿಟ್ ನೀಡಲಾಗಿದೆ. ಮಳೆ ಆರಂಭವಾಗಿದ್ದು, ಲೋಕೋಪಯೋಗಿ ಇಲಾಖೆ ಸಹಿತ ಎಲ್ಲ ಇಲಾಖೆ ಅಧಿಕಾರಿಗಳು ಜಾಗೃತರಾಗಿರಬೇಕು ಎಂದರು.
ಫಲಾನುಭವಿ ಆನಂದ ಶೆಟ್ಟಿ ಮಾತನಾಡಿ, ಪ್ರತಿ ವರ್ಷ ಸರ್ಕಾರ ಕಾರ್ಮಿಕರಿಗೆ ಗುಣಮಟ್ಟದ ಕಿಟ್ ನೀಡುತ್ತಿದೆ. ಕಾರ್ಮಿಕರು ತಮ್ಮ ಹೆಸರನ್ನು ಪ್ರತಿ ವರ್ಷ ಕಾರ್ಮಿಕ ಇಲಾಖೆಯಲ್ಲಿ ಮರು ನೋಂದಾವಣೆ ಮಾಡಿಸಿಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ವಿಮೆ, ವಿವಾಹ ಸಹಿತ ಸಹಾಯಧನ ಲಭ್ಯವಿದೆ ಎಂದರು.
ಬೆಟ್ಟಗೆರೆ ಪಿಎಸಿಎಸ್ ಅಧ್ಯಕ್ಷ ಕೆ.ಎಂ.ರಮೇಶ್ ಭಟ್, ಮುಖಂಡರಾದ ಸೌಭಾಗ್ಯ ಗೋಪಾಲನ್, ಮೂಡ್ಲು ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು, ಕಿರಣ್, ಶ್ರೀಕಾಂತ್, ಪ್ರಶಾಂತ್, ಅಣ್ಣಪ್ಪ, ಶೂನ್ಯ ರಮೇಶ್, ಮುನ್ಸಿದ್, ಜಯಂತ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net