ಪಿಯುಸಿ ವಿಜ್ಞಾನ ಮುಗಿಸಿದ ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್, ಬಿಎಸ್ಸಿ ಅಗ್ರಿ, ಬಿ.ಫಾರ್ಮ, ಬಿಎಸ್ ಸಿ ನರ್ಸಿಂಗ್, ಬಿಎಸ್ಸಿ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಸೇರ್ಪಡೆಯಾಗುತ್ತಾರೆಯೇ ಹೊರತು ಪ್ಯಾರಾ ಮೆಡಿಕಲ್ ಕೋರ್ಸ್ ನತ್ತ ಯಾವ ವಿದ್ಯಾರ್ಥಿಗಳು ತಲೆಹಾಕುವುದಿಲ್ಲ. ಇದರಿಂದ ಪ್ರಸ್ತುತ ಪ್ಯಾರಾಮೆಡಿಕಲ್ ಗೆ ರಾಜ್ಯದಲ್ಲಿ ವಾರ್ಷಿಕ 24 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕೆಲವೇ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದರೂ ಆಶ್ಚರ್ಯವಿಲ್ಲ.