ಉದ್ಯೋಗ ನೋಂದಣಿಯಿಂದ ಉತ್ತಮ ಅವಕಾಶ

ಬಾಳೆಹೊನ್ನೂರನ ರೇಣುಕನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜಿನಲ್ಲಿ ನಡೆದ ಉದ್ಯೋಗ ನೋಂದಣಿ ಶಿಬಿರದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಜಯಶ್ರೀ ಅವರನ್ನು ಗೌರವಿಸಲಾಯಿತು.
ಬಾಳೆಹೊನ್ನೂರನ ರೇಣುಕನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜಿನಲ್ಲಿ ನಡೆದ ಉದ್ಯೋಗ ನೋಂದಣಿ ಶಿಬಿರದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಜಯಶ್ರೀ ಅವರನ್ನು ಗೌರವಿಸಲಾಯಿತು.
Published on
ಬಾಳೆಹೊನ್ನೂರು: ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗ ನೋಂದಣಿ ಮಾಡಿಕೊಳ್ಳುವುದರಿಂದ ನಿರುದ್ಯೋಗಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಜಯ ಶ್ರೀ ಹೇಳಿದರು.
ರೇಣುಕನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತವಾಗಿ ಉದ್ಯೋಗ ನೋಂದಣಿ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಸಿಗುವುದಕ್ಕೆ ಸಹಕಾರವಾಗಲಿ ಎಂಬ ಸದುದ್ದೇಶದಿಂದ ಐಟಿಐ ಕಾಲೇಜಿನಲ್ಲಿ ಉಚಿತವಾಗಿ ಉದ್ಯೋಗ ನೋಂದಣಿ ಶಿಬಿರ ಆಯೋಜಿಸಲಾಗಿದೆ. ಐಟಿಐ ವಿದ್ಯಾರ್ಥಿಗಳಿಗೆ ಸಹಸ್ರಾರು ಉದ್ಯೋಗವಕಾಶಗಳಿದ್ದು, ವಿದ್ಯಾರ್ಥಿಗಳು ತಮ್ಮ ಸಂಕುಚಿತ ಭಾವನೆ ದೂರವಿಟ್ಟು ಉತ್ತಮವಾಗಿ ತರಬೇತಿ ಪಡೆದು, ಉತ್ತಮ ಅಂಕಗಳಿಸಿದರೆ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ, ಕೆಪಿಟಿಸಿಎಲ್, ರೈಲ್ವೆ, ಎಚ್‌ಎಎಲ್ ಇನ್ನೂ ಮುಂತಾದ ಉದ್ಯಮಗಳಲ್ಲಿ ಉದ್ಯೋಗವಕಾಶಗಳಿವೆ ಎಂದರು.
ಉದ್ಯೋಗ ನೋಂದಣಿ ಮಾಡಿಸಿದ ನಂತರ ಪ್ರತಿ ಮೂರು ವರ್ಷಕ್ಕೊಮ್ಮೆ ನೋಂದಣಿ ನವೀಕರಣ ಮಾಡಿಸಬೇಕು. ನಿರುದ್ಯೋಗಿಗಳು ಉದ್ಯೋಗ ವಿನಿಮಯ ಕಚೇರಿಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡರೆ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಶಿಕ್ಷಕರಾದ ಚಂದ್ರಶೇಖರ್, ಅಶೋಕ್, ಶ್ರೀನಿವಾಸ್, ಪ್ರಕಾಶ್ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net