ಬದುಕು ಸಾರ್ಥಕಗೊಳ್ಳಲು ಸತ್ಕಾರ್ಯಗಳು ಅವಶ್ಯಕ

ಬಾಳೆಹೊನ್ನೂರು ರಂಭಾಪುರಿ ಪೀಠದ ಸಭಾಂಗಣದಲ್ಲಿ ನಡೆದ ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳ 58ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶಂಭುಲಿಂಗ ಶಿವಾಚಾರ್ಯರಿಗೆ ಆಶೀರ್ವದಿಸಿದರು.
ಬಾಳೆಹೊನ್ನೂರು ರಂಭಾಪುರಿ ಪೀಠದ ಸಭಾಂಗಣದಲ್ಲಿ ನಡೆದ ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳ 58ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶಂಭುಲಿಂಗ ಶಿವಾಚಾರ್ಯರಿಗೆ ಆಶೀರ್ವದಿಸಿದರು.
Published on
ಬಾಳೆಹೊನ್ನೂರು: ಯಶಸ್ಸಿನ ಮನುಷ್ಯನಾಗುವ ಬದಲಿಗೆ ಮೌಲ್ಯಯುತ ವ್ಯಕ್ತಿಯಾಗಿ ಬಾಳುವುದು ಶ್ರೇಯಸ್ಕರ. ಬದುಕು ಸಾರ್ಥಕಗೊಳ್ಳಲು ಸತ್ಕಾರ್ಯಗಳು ಅವಶ್ಯಕ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದ ಸಭಾಂಗಣದಲ್ಲಿ ನಡೆದ ಅಂಬಾಜೋಗಾಯಿ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳವರ 58ನೇ ಜನ್ಮ ದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಗವಂತ ನಮ್ಮೆಲ್ಲರಿಗೆ ಒಳ್ಳೆಯ, ಕೆಟ್ಟ ಜೀವನ ನೀಡಿಲ್ಲ. ನಮಗೆ ಅಮೂಲ್ಯ ಜೀವನ ನೀಡಿದ್ದಾನೆ. ಅದನ್ನು ಒಳ್ಳೆಯದು, ಕೆಟ್ಟದ್ದನ್ನಾಗಿ ಮಾಡಿಕೊಳ್ಳುವುದು ಅವರವರಿಗೆ ಬಿಟ್ಟ ಜವಾಬ್ದಾರಿಯಾಗಿದೆ ಎಂದರು.
ಒಳ್ಳೆಯ ನಡತೆಯಿಂದ ನಮಗೆ ಯಾವುದೇ ಲಾಭ ಸಿಗದಿರಬಹುದು. ಆದರೆ ಅಂತಹ ಗುಣಕ್ಕೆ ಸಾವಿರಾರು ಹೃದಯಗಳನ್ನು ಗೆಲ್ಲುವ ಶಕ್ತಿಯನ್ನು ಹೊಂದಿರುತ್ತದೆ. ಸಂಪತ್ತು ಅಂತಸ್ತು ತಂದುಕೊಡಬಹುದು. ವಿದ್ಯೆ ಅರಿವು ನೀಡಬಹುದು. ಆದರೆ ಗೌರವ ತಂದುಕೊಡುವುದು ನಮ್ಮ ನಡತೆಯಿಂದ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಸಂಸ್ಕಾರ, ಸದ್ವಿಚಾರಗಳಿಂದ ಜಗವನ್ನು ಗೆಲ್ಲಬಹುದು. ಅಹಂಕಾರವೊಂದಿದ್ದರೆ ಗಳಿಸಿದ್ದೆಲ್ಲವನ್ನು ಕಳೆದುಕೊಳ್ಳಬಹುದು. ಕಾಯಕ ಚೈತನ್ಯದಿಂದ ಬಾಳಿದರೆ ಬದುಕು ಉಜ್ವಲಗೊಳ್ಳುವುದು ಎಂದು ಶ್ರೀಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಂಬಾಜೋಗಾಯಿ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ಧರ್ಮಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಸದಾ ಶ್ರಮಿಸಿದವರು. ಪರಿಶುದ್ಧ ಚಾರಿತ್ರ್ಯ ಸಂಸ್ಕೃತಿ ಪರಿಪಾಲನೆಯಿಂದ ಅವರ ಬದುಕು ಉಜ್ವಲಗೊಂಡಿದೆ ಎಂದರು.
ಅಷ್ಟಿಮಠದ ವಿಶ್ವಚೈತನ್ಯ ಶಿವಾಚಾರ್ಯ ಸ್ವಾಮಿಗಳು, ಕರ್ಜಿಗಿ ಮುರುಗೇಂದ್ರ ಸ್ವಾಮಿ ಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಪಾತ್ರಿ ಮಠದ ಶ್ರೀ ಕಾಶೀನಾಥ ಶಿವಾಚಾರ್ಯರು, ಹುಡುಗಿ ಸಂಸ್ಥಾನ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net