ಕೌಶಲ್ಯ ಪಡೆದು ಸ್ವ ಉದ್ಯೋಗ ನಡೆಸಿ

ಗಡಿಗೇಶ್ವರದ ಆಡುವಳ್ಳಿ ಗ್ರಾಪಂ ಕಚೇರಿಯಲ್ಲಿ ಆಡುವಳ್ಳಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾ ಸಭೆ ನಡೆಯಿತು.
ಗಡಿಗೇಶ್ವರದ ಆಡುವಳ್ಳಿ ಗ್ರಾಪಂ ಕಚೇರಿಯಲ್ಲಿ ಆಡುವಳ್ಳಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾ ಸಭೆ ನಡೆಯಿತು.
Published on
ಬಾಳೆಹೊನ್ನೂರು: ಒಕ್ಕೂಟದ ಸದಸ್ಯರು ಕೌಶಲ್ಯ ತರಬೇತಿ ಪಡೆದು ಸ್ವ ಉದ್ಯೋಗ ಮಾಡಬೇಕು ಎಂದು ತಾಲೂಕು ಎನ್‌ಆರ್‌ಎಲ್‌ಎಂ ಯೋಜನಾಧಿಕಾರಿ ಯಾದವ್‌ರಾಜ್ ಕರೆ ನೀಡಿದರು.
ಗಡಿಗೇಶ್ವರದ ಆಡುವಳ್ಳಿ ಗ್ರಾಪಂ ಕಚೇರಿಯಲ್ಲಿ ಆಡುವಳ್ಳಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಸಂಜೀವಿನಿ ಒಕ್ಕೂಟದಲ್ಲಿ ಸಿಗುವ ಸಾಲ ಹಾಗೂ ಇತರೆ ಸೌಲಭ್ಯಗಳನ್ನು ಸದಸ್ಯರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಎನ್‌ಆರ್‌ಎಲ್‌ಎಂ ಯೋಜನೆ ವಲಯ ಮೇಲ್ವೀಚಾರಕ ಗಿರೀಶ್ ಮಾತನಾಡಿ, ಆಡುವಳ್ಳಿ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದಲ್ಲಿ 39 ಸ್ವ ಸಹಾಯ ಸಂಘಗಳಿದ್ದು 504 ಸದಸ್ಯರಿದ್ದು, ಸದಸ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.
ಆಡುವಳ್ಳಿ ಗ್ರಾಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮ ಮಾತನಾಡಿ, ಸಂಜೀವಿನಿ ಒಕ್ಕೂಟದಲ್ಲಿ ಇನ್ನೂ ಹೆಚ್ಚಿನ ಸಂಘಗಳ ರಚನೆ ಮಾಡಬೇಕಾಗಿದೆ. ಮಹಿಳೆಯರು ಸ್ವ ಉದ್ಯೋಗ ಮಾಡಿ ಆರ್ಥಿಕವಾಗಿ ಸದೃಡವಾಗಬೇಕು ಎಂದರು.
ಒಕ್ಕೂಟದ ಕಾರ್ಯದರ್ಶಿ ಧನಲಕ್ಷ್ಮೀ 2025-26 ನೇ ಸಾಲಿನ ಲೆಕ್ಕ ಪರಿಶೋಧನೆ ಮಂಡಿಸಿದರು. ಗ್ರಾಪಂ ಪಿಡಿಒ ಪಿ.ಕೆ.ಪ್ರಕಾಶ್, ಒಕ್ಕೂಟದ ಖಜಾಂಚಿ ಜ್ಯೋತಿ, ಕೃಷಿ ವ್ಯವಸ್ಥಾಪಕ ಅಭಿಜಿತ್, ಕೃಷಿಯೇತರ ವ್ಯವಸ್ಥಾಪಕರಾದ ವಿನುತ, ಬಿಆರ್‌ಪಿಪಿಆರ್‌ಐ ಶೈನಿ, ರಮ್ಯ, ಎಲ್‌ಸಿಆರ್‌ಪಿ ಅನಿತ, ಸುನೀತ, ಕೃಷಿ ಸಖಿ ಶಾರದ, ಗಂಗಾವತಿ,ಮಂಜುಳ, ಆಶಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net