೨೦೨೧ರ ಡಿಸೆಂಬರ್ ೧೦ರಂದು ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದೆ ಪುರಸಭೆ, ಪಟ್ಟಣಪಂಚಾಯಿತಿಯ ೧೨ ಮಂದಿ ನಾಮನಿರ್ದೇಶನ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು. ೨೦೨೧ರ ಡಿಸೆಂಬರ್ ೧೪ರಂದು ಮತಎಣಿಕೆ ನಡೆದಿದ್ದು, ಒಟ್ಟು ೨,೪೧೦ ಮತಗಳಲ್ಲಿ ೩೯ ಅಸಿಂಧುವಾಗಿದ್ದು, ೨,೩೭೧ ಮತ ಸಿಂಧುವಾಗಿತ್ತು. ಆಗ ಎಂ.ಕೆ.ಪ್ರಾಣೇಶ್ ೧,೧೮೮ ಮತಪಡೆದರೆ, ಗಾಯತ್ರಿಶಾಂತೇಗೌಡ ೧,೧೮೨ ಮತಪಡೆದಿದ್ದರು. ಬಿಜೆಪಿಯ ಎಂ.ಕೆ.ಪ್ರಾಣೇಶ್, ಕಾಂಗ್ರೆಸ್‌ನ ಎ.ವಿ.ಗಾಯತ್ರಿಶಾಂತೇಗೌಡ ವಿರುದ್ಧ ೬ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.