ಸರ್ಕಾರಕ್ಕೆ ಸಮನಾಗಿ ಮಠಗಳ ಕಾರ್ಯನಿರ್ವಹಣೆ

ಹುಲಿಕೆರೆ ದೊಡ್ಡ ಮಠದಲ್ಲಿ ಶ್ರೀ ವಿರೂಪಾಕ್ಷಲಿಂಗ ಸ್ವಾಮೀಜಿ ಅವರ ವಧರ್ಂತಿ ಮಹೋತ್ಸವದ ಉದ್ಘಾಟನಾ ಸಮಾರಂರಂಭದಲ್ಲಿ ಶಾಸಕ ಎಚ್.ಡಿ ತಮ್ಮಯ್ಯ, ಕಿರಿಯಶ್ರೀಗಳು ರಚಿಸಿದ ಮೌಖ್ತಿಕ ಶಕ್ತಿ ಕೃತಿ ಬಿಡುಗಡೆಗೊಳಿಸಿದರು.
ಹುಲಿಕೆರೆ ದೊಡ್ಡ ಮಠದಲ್ಲಿ ಶ್ರೀ ವಿರೂಪಾಕ್ಷಲಿಂಗ ಸ್ವಾಮೀಜಿ ಅವರ ವಧರ್ಂತಿ ಮಹೋತ್ಸವದ ಉದ್ಘಾಟನಾ ಸಮಾರಂರಂಭದಲ್ಲಿ ಶಾಸಕ ಎಚ್.ಡಿ ತಮ್ಮಯ್ಯ, ಕಿರಿಯಶ್ರೀಗಳು ರಚಿಸಿದ ಮೌಖ್ತಿಕ ಶಕ್ತಿ ಕೃತಿ ಬಿಡುಗಡೆಗೊಳಿಸಿದರು.
Published on
ಕಡೂರು: ಸಮಾಜವನ್ನು ಸರಿ ದಾರಿಗೆ ತರುವಲ್ಲಿ ಮಠ ಮಾನ್ಯಗಳ ಪಾತ್ರ ಅಪಾರ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಹುಲಿಕೆರೆ ದೊಡ್ಡಮಠದಲ್ಲಿ ಶ್ರೀ ವಿರೂಪಾಕ್ಷಲಿಂಗ ಸ್ವಾಮೀಜಿ ಅವರ 81ನೇ ವರ್ಷದ ಸಹಸ್ರ ಚಂದ್ರದರ್ಶನ ವರ್ಧಂತಿ ಮಹೋತ್ಸವ, ಲಿಂಗೈಕ್ಯ ಶ್ರೀ ಬಸವರಾಜ ದೇಶೀಕೇಂದ್ರ ಮಹಾಸ್ವಾಮೀಜಿ ಪುಣ್ಯ ಸ್ಮರಣಾರಾಧನೆ ಹಾಗೂ ಕಿರಿಯ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 3ನೇ ವರ್ಷದ ಪಟ್ಟಾಕಾರ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಸ್ವಾಮೀಜಿಗಳು ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಸರ್ಕಾರಕ್ಕೆ ಸಮನಾಂತರವಾಗಿ ಮಠಗಳು ಕೆಲಸ ಮಾಡುತ್ತಿವೆ. ಅದು ಅನ್ನ ಮತ್ತು ವಿದ್ಯೆ ದಾಸೋಹಗಳಂತಿರಬಹುದು. ಹುಲಿಕೆರೆ ಶ್ರೀ ಮಠವು ಭಕ್ತರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಭಾರತ ದೇಶದ ಸಂಸ್ಕೃತಿಯನ್ನು ಯಾರೂ ಸರಿಗಟ್ಟಲಾರರು. ಆದಿ ಅಂತ್ಯವಿಲ್ಲದ ವಿವಿಧತೆಯಲ್ಲಿ ಏಕತೆ ಪ್ರತಿಪಾದಿಸುವುದೇ ಸನಾತನ ಧರ್ಮವಾಗಿದೆ. ಭೂಮಿ, ಸೂರ್ಯ ಮತ್ತು ಚಂದ್ರರನ್ನು ಹೇಗೆ ನಾಶಮಾಡಲು ಸಾಧ್ಯವಿಲ್ಲವೋ ಹಾಗೇ ಸನಾತನ ಧರ್ಮವನ್ನು ಅನೇಕ ಮತಾಂತರ ಮತ್ತು ಅಪಪ್ರಚಾರದಿಂದ ನಾಶಗೊಳಿಸಲು ಸಾಧ್ಯವಿಲ್ಲ. ಸನಾತನ ಧರ್ಮ ಎಂದರೆ ಎಲ್ಲರನ್ನು ಒಂದೇ ಸಮನಾಗಿ ಕಾಣುವುದು. ಯಾರಿಗೂ ತೊಂದರೆ ಕೊಡದಂತೆ ದೇವನೊಬ್ಬ ನಾಮ ಹಲವು ಎಂಬಂತೆ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವುದೇ ಸನಾತನ ಧರ್ಮವಾಗಿದೆ ಎಂದರು.
ಸಾಹಿತಿ ಡಿ.ಎಂ.ಮಂಜುನಾಥ ಸ್ವಾಮಿ ಉಪನ್ಯಾಸ ನೀಡಿದರು. ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ. ಮಾಜಿ ಸದಸ್ಯ ಕಲ್ಮರುಡಪ್ಪ, ಗ್ರಾಮದ ಮುಖಂಡ ಶಾಂತಕುಮಾರ್, ಮಹಾಲಿಂಗಪ್ಪ, ಜಗದೀಶ್, ಮಲ್ಲೇಶಪ್ಪ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net