ಎನ್.ಆರ್.ಪುರದಲ್ಲಿ ಪ್ರತಿ ದಿನ ನಾಲ್ಕು ಟನ್ ಕಸ ಸಂಗ್ರಹ

ಎನ್.ಆರ್.ಪುರ ಪಪಂ ಕಸ ವಿಲೇವಾರಿ ಘಟಕಕ್ಕೆ ಡಿಸಿಎಂಸಿ ಶಾಲಾ ಮಕ್ಕಳು ಭೇಟಿ ನೀಡಿ ಕಸ ವಿಲೇವಾರಿ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಪ್ರಶಾಂತ್.ಎಲ್.ಶೆಟ್ಟಿ, ಜುಬೇದಾ,ಆರ್.ವಿ.ಮಂಜುನಾಥ್, ವಿಜಯಕುಮಾರ್ ಇದ್ದರು.
ಎನ್.ಆರ್.ಪುರ ಪಪಂ ಕಸ ವಿಲೇವಾರಿ ಘಟಕಕ್ಕೆ ಡಿಸಿಎಂಸಿ ಶಾಲಾ ಮಕ್ಕಳು ಭೇಟಿ ನೀಡಿ ಕಸ ವಿಲೇವಾರಿ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಪ್ರಶಾಂತ್.ಎಲ್.ಶೆಟ್ಟಿ, ಜುಬೇದಾ,ಆರ್.ವಿ.ಮಂಜುನಾಥ್, ವಿಜಯಕುಮಾರ್ ಇದ್ದರು.
Published on
ಎನ್.ಆರ್.ಪುರ: ಪಟ್ಟಣದ ವ್ಯಾಪ್ತಿಯಿಂದ ಪ್ರತಿ ದಿನ ನಾಲ್ಕು ಟನ್ ಕಸ ಸಂಗ್ರಹವಾಗುತ್ತದೆ ಎಂದು ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಹೇಳಿದರು.
ಪಪಂ ಕಸ ವಿಲೇವಾರಿ ಘಟಕಕ್ಕೆ ಡಿಸಿಎಂಸಿ ಶಾಲಾ ಮಕ್ಕಳು ಭೇಟಿ ನೀಡಿದಾಗ ಮಾಹಿತಿ ನೀಡಿ, ಸಾರ್ವಜನಿಕರಿಗೆ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ನೀಡಬೇಕು. ಇಲ್ಲವಾದಲ್ಲಿ ಕಸ ವಿಂಗಡನೆ ಕಷ್ಟವಾಗುತ್ತದೆ. ಈ ಬಗ್ಗೆ ಪಪಂನಿಂದ ಜನರಲ್ಲಿ ಸಾಕಷ್ಟು ಅರಿವು ಮೂಡಿಸು ಪ್ರಯತ್ನ ನಡೆಸಿದರೂ ಸಾರ್ವಜನಿಕರು ಕಸವನ್ನು ಬೇರ್ಪಡಿಸಿ ನೀಡುವುದಲ್ಲ ಎಂದರು.
ಪಪಂ ಮಾಜಿ ಅಧ್ಯಕ್ಷೆ ಜುಬೇದಾ ಮತನಾಡಿ, ಕಸ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಜನರು ಎಲ್ಲಿಂದರಲ್ಲಿ ರಸ್ತೆ ಬದಿಗಳಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಡ್ರಾ ಮಿಲ್ ಹಾಗೂ ಬೇಲಿಂಗ್ ಮಿಷನ್ ನೀಡಲಾಗಿದೆ. ಇದರಿಂದ ಕಸ ಬೇರ್ಪಡಿಸಲು ಸಹಾಯವಾಗಿದೆ ಎಂದರು.
ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, 700 ಜನಕ್ಕೆ ಒಬ್ಬ ಪೌರಕಾರ್ಮಿಕರಂತೆ ನಮ್ಮ ಪಟ್ಟಣ ಪಂಚಾಯಿತಿಯಲ್ಲಿ 11ಜನ ಕಾರ್ಯನಿರ್ವಹಿಸುತ್ತಿದ್ದಾರೆ ಆದರೂ ನಮಗೆ ಪೌರಕಾರ್ಮಿಕರ ಕೊರತೆ ಇದೆ ಎಂದರು.
ಡಿಸಿಎಂಸಿ ಶಾಲೆ ಪ್ರಾಚಾರ್ಯೆ ಪದ್ಮಾ ರಮೇಶ್ ಮಾತನಾಡಿ, ನಮ್ಮ ಶಾಲೆ ಸಿಬಿಎಸ್‌ಸಿ ವಿಭಾಗದ ಗ್ರೇಡ್ 6 ರಿಂದ ಗ್ರೇಡ್ 8 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಸೃಜನಶೀಲತೆ ಬೆಳೆಸುವ ಗುರಿ ಹೊಂದಲಾಗಿದೆ. ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ, ವಿಂಗಡಣೆ ಹಾಗೂ ವಿಲೇವಾರಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗಿದೆ ಎಂದರು.
ವಿಜಯಕುಮಾರ್, ತರಗತಿ ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿದಂತೆ ಸುಮಾರು 150 ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net