ನಾಲ್ಕು ದೇವಸ್ಥಾನ ಕಳ್ಳತನ ಮಾಡಿದ ಆರೋಪಿಗಳ ಬಂಧನ

ಚಿಕ್ಕಮಗಳೂರು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಹಾಸನ ಜಿಲ್ಲೆಯ ಒಂದು ದೇವಾಲಯ ಸೇರಿದಂತೆ ಒಟ್ಟು ನಾಲ್ಕು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಹಾಸನ ಜಿಲ್ಲೆಯ ಒಂದು ದೇವಾಲಯ ಸೇರಿದಂತೆ ಒಟ್ಟು ನಾಲ್ಕು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನ ಕಳ್ಳತನ ಮಾಡಿದ ಆರೋಪಿಗಳ ಬಂಧನ
  • ಶೃಂಗೇರಿಯ ಮೆಣಸೆ ಗ್ರಾಮದ ಕನ್ಯಾಕುಮಾರಿ ದೇವಸ್ಥಾನ
ಚಿಕ್ಕಮಗಳೂರು: 
ಚಿಕ್ಕಮಗಳೂರು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಹಾಸನ ಜಿಲ್ಲೆಯ ಒಂದು ದೇವಾಲಯ ಸೇರಿದಂತೆ ಒಟ್ಟು ನಾಲ್ಕು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಶೃಂಗೇರಿಯ ಮೆಣಸೆ ಗ್ರಾಮದ ಕನ್ಯಾಕುಮಾರಿ ದೇವಸ್ಥಾನ ಹಾಗೂ ಯಡಿದಳ್ಳಯ ಕೊಟ್ಟಾರು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದ ಕಳ್ಳತನದ ಆರೋಪಿಗಳನ್ನು ಪತ್ತೆ ಮಾಡುವುದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಂಡ ರಚನೆ ಮಾಡಿದ್ದರು.
ಈ ವೇಳೆ ಚಿಕ್ಕಮಗಳೂರಿನ ಉಪ್ಪಳಿ ಕಲ್ಪದೊಡ್ಡಿಯ ಮಂಜುನಾಥ(38) ಹಾಗೂ ಭದ್ರಾವತಿ ತಾಲೂಕಿನ ಹೊನ್ನಟ್ಟಿ ಹೊಸೂರು ಗ್ರಾಮದ ತಿಪ್ಪೇಸ್ವಾಮಿ (44) ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶೃಂಗೇರಿಯ 2 ದೇವಸ್ಥಾನ ಸೇರಿದಂತೆ ಮೂಡಿಗೆರೆ ಹಾಗೂ ಹಾಸನ ಬೇಲೂರಿನ ಒಂದೊಂದು ದೇವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ 4 ಕೆ.ಜಿ ಬೆಳ್ಳಿ ಹಾಗೂ 1 ಗ್ರಾಂ ಬಂಗಾರ, ಬೈಕ್‌ , ಕಾರು ಸೇರಿದಂತೆ ಒಟ್ಟು 11 ಲಕ್ಷ ರು, ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕನ್ಯಾಕುಮಾರಿ ದೇವಸ್ಥಾನ ಫೆಬ್ರವರಿ 25 ರ ರಾತ್ರಿ ಕಳ್ಳತನವಾಗಿತ್ತು. ಈ ವೇಳೆ ಕಳ್ಳರು 3 ಹುಂಡಿ, 200 ಗ್ರಾಂ ಬೆಳ್ಳಿಯ ದೇವರ ಮುಖವಾಡ ಹಾಗೂ 2 ಗ್ರಾಂ ತೂಕದ ಚಿನ್ನದ ತಾಳಿ ಸರವು ಕಳ್ಳತನವಾಗಿತ್ತು. ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅದೇ ರೀತಿ ಯಡದಳ್ಳಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್‌ 17 ರ ರಾತ್ರಿ ಗರ್ಭಗುಡಿಯ ಬಾಗಿಲು ಓಡೆದು 1.50 ಲಕ್ಷ ದ ಬೆಳ್ಳಿಯ ಪ್ರಭಾವಳಿ 30 ಸಾವಿರ ಮೌಲ್ಯದ ಬೆಳ್ಳಿಯ ಚೊಂಬು 15 ಸಾವಿರ ರು. ಮೌಲ್ಯದ ಬೆಳ್ಳಿಯ ಭಟ್ಟಲು 25 ಸಾವಿರ ರು. ಮೌಲ್ಯದ ಎರಡು ಬೆಳ್ಳಿಯ ಕೌಳಿಗೆ ಮತ್ತು ಸೌಟು, ಕಾಣಿಕೆ ಪೆಟ್ಟಿಗೆ ಕಳ್ಳತನವಾಗಿತ್ತು.
ಅಪರಾಧ ದಳ ತನಿಖಾ ತಂಡದಲ್ಲಿದ್ದ ಅಧಿಕಾರಿ ಸಿಬ್ಬಂದಿಗೆ ಪೋಲಿಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net