ಶಿವ-ವಿಷ್ಣು ಭಗವಂತನ ಸ್ವರೂಪಿಗಳು

ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಗೆ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.
ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಗೆ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.
Published on
ಶೃಂಗೇರಿ: ಶೃಂಗೇರಿ ಕ್ಷೇತ್ರ ಪವಿತ್ರವಾದ ಕ್ಷೇತ್ರ. ಶಿವ-ವಿಷ್ಣು ಇಬ್ಬರು ಭಗವಂತನ ಸ್ವರೂಪಿಗಳು.ಆದರೆ ಅವರಲ್ಲಿರುವ ಚೈತನ್ಯ ಒಂದೇ. ಹಾಗೆಯೇ ಹರಿ-ಹರ ಸ್ವರೂಪವಾಗಿ ನಮ್ಮ ತುಂಗಾ ಭದ್ರಾ ನದಿ ಹರಿಯುತ್ತದೆ ಎಂದು ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.
ಕಿಗ್ಗಾದ ಶ್ರೀ ಋಷ್ಯ ಶೃಂಗ ದೇವಸ್ಥಾನದಲ್ಲಿ ಐದು ದಿನದಿಂದ ನಡೆಯುತ್ತಿರುವ ಶತಚಂಡಿ ಹಾಗೂ ಮಹಾರುದ್ರಯಾಗದ ಪೂರ್ಣಹುತಿಯಲ್ಲಿ ಭಾಗವಹಿಸಿ ನಂತರ ಅನುಗ್ರಹ ಭಾಷಣದಲ್ಲಿ ಮಾತನಾಡಿ, ಕಿಗ್ಗಾ ಶ್ರೀ ಋಷ್ಯ ಶೃಂಗೇಶ್ವರ ಸ್ವಾಮಿ ಮಹಾಮಹೀಮರು. ಪುಣ್ಯಭೂಮಿ ಶೃಂಗೇರಿ ಮಹಿಮೆ ಪುರಾಣದಲ್ಲಿ ಉಲ್ಲೇಖವಾಗಿದೆ.ಪರಮಾತ್ಮನ ಮೇಲೆ ನಮಗೆ ಸದಾ ಶ್ರದ್ಧಾ ಭಕ್ತಿ ಇರಬೇಕು.ಭಗವಂತನ ಅನುಗ್ರಹ ಹಾಗೂ ನಾವು ಮಾಡಿದ ಉತ್ತಮ ಕೆಲಸಕ್ಕೆ ನಮಗೆ ಒಂದಲ್ಲ ಒಂದು ದಿನ ಭಗವಂತ ಉತ್ತಮ ಲ ನೀಡುತ್ತಾನೆ. ಲೋಕದಲ್ಲಿ ಚೆನ್ನಾಗಿ ಓದಿದವರಿಗೆ ಪ್ರಶ್ನೆ ಕೇಳುವುದು ಜಾಸ್ತಿ. ಕೇಳುವ ಪ್ರಶ್ನೆಗೆ ಉತ್ತರ ನೀಡಲು ಓದಿದವನಿಗೆ ಕಷ್ಟವಾದರೂ ಅವನಿಗೆ ಪರಿಪೂರ್ಣ ಅಂಕ ದೊರಕುತ್ತದೆ ಎಂದರು.
ಭಗವಂತ ನಮ್ಮನ್ನು ಪರೀಕ್ಷಿಸುತ್ತಲೇ ಇರುತ್ತಾನೆ. ಹೆಚ್ಚು ಪರೀಕ್ಷೆಯಿಂದ ನಮ್ಮ ಸಕಲ ಸಂಕಷ್ಟವನ್ನು ದೂರಮಾಡುತ್ತಾನೆ. ಪೂರ್ಣಾಹುತಿಯಲ್ಲಿ ಭಾಗವಹಿಸಿದ ಜಗದ್ಗರುಗಳು ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಹಾಗೂ ಶಾಂತಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net