ರೈತರು ವಿಮಾ ಯೋಜನೆಯ ಸೌಲಭ್ಯ ಪಡೆಯಲಿ

ಮೂಡಿಗೆರೆ ಕೃಷಿ ಇಲಾಖೆಯಿಂದ ಭತ್ತದ ಬೆಳೆಗೆ ವಿಮಾ ಯೋಜನೆಯ ಅರಿವು ಮೂಡಿಸುವ ಆಟೋ ಪ್ರಚಾರಕ್ಕೆ ಶಾಸಕಿ ನಯನಾ ಮೋಟಮ್ಮ ಚಾಲನೆ ನೀಡಿದರು. ಪಿ.ಕೆ.ನಾಗೇಶ್, ಬಿ.ಆರ್.ಯತೀಶ್, ಜಗನ್ನಾಥ ಗೌಡ, ಬಿ.ಕೆ.ಚಂದ್ರಶೇಖರ್, ಸುಮಾ, ದಿವ್ಯಾ, ಅಮರೇಶ್, ರಶ್ಮಿ, ಅನನ್ಯಾ ಇತರರಿದ್ದರು.
ಮೂಡಿಗೆರೆ ಕೃಷಿ ಇಲಾಖೆಯಿಂದ ಭತ್ತದ ಬೆಳೆಗೆ ವಿಮಾ ಯೋಜನೆಯ ಅರಿವು ಮೂಡಿಸುವ ಆಟೋ ಪ್ರಚಾರಕ್ಕೆ ಶಾಸಕಿ ನಯನಾ ಮೋಟಮ್ಮ ಚಾಲನೆ ನೀಡಿದರು. ಪಿ.ಕೆ.ನಾಗೇಶ್, ಬಿ.ಆರ್.ಯತೀಶ್, ಜಗನ್ನಾಥ ಗೌಡ, ಬಿ.ಕೆ.ಚಂದ್ರಶೇಖರ್, ಸುಮಾ, ದಿವ್ಯಾ, ಅಮರೇಶ್, ರಶ್ಮಿ, ಅನನ್ಯಾ ಇತರರಿದ್ದರು.
Published on
ಮೂಡಿಗೆರೆ: ಮಳೆ ಹೆಚ್ಚಾದಾಗ ಮತ್ತು ಕಡಿಮೆಯಾದಾಗ ರೈತರ ಜಮೀನಿನಲ್ಲಿ ಬೆಳೆಗಳಿಗೆ ಸಂಚಕಾರ ಉಂಟಾಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂಥ ಸಂದರ್ಭದಲ್ಲಿ ಬೆಳೆ ವಿಮಾ ಯೋಜನೆ ರೈತರ ನೆರವಿಗೆ ಬರುತ್ತದೆ. ಎಲ್ಲ ರೈತರೂ ವಿಮಾ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭತ್ತದ ಬೆಳೆಗೆ ವಿಮೆ ನೋಂದಣಿ ಹಾಗೂ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಗ್ಗೆ ಮೂಡಿಗೆರೆ ಮತ್ತು ಕಳಸ ತಾಲೂಕಿನ 29 ಗ್ರಾಪಂ ವ್ಯಾಪ್ತಿಯಲ್ಲಿ ಆಟೋ ಪ್ರಚಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ರೈತರನ್ನು ಸಂಕಷ್ಟದಿಂದ ದೂರ ಮಾಡುವುದು ಸರ್ಕಾರದ ಉದ್ದೇಶ. ರೈತರು ಕೃಷಿ ಚಟುವಟಿಕೆಯಿಂದ ದೂರ ಸರಿಯಬಾರದು. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ವಿಮೆ ಯೋಜನೆ ತಲುಪುವಂತಾಗಬೇಕು. ಇದರ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಸಲುವಾಗಿ ಕೃಷಿ ಇಲಾಖೆಯಿಂದ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಆ.14ರೊಳಗೆ ತಾಲೂಕಿನ ಎಲ್ಲ ರೈತರು ಭತ್ತದ ಕೃಷಿಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದರು.
ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಪಿ.ಕೆ.ನಾಗೇಶ್, ಸದಸ್ಯರಾದ ಬಿ.ಆರ್.ಯತೀಶ್, ಜಗನ್ನಾಥ್ ಗೌಡ, ಬಿ.ಕೆ.ಚಂದ್ರಶೇಖರ್, ತಾಲೂಕು ಕೆಡಿಪಿ ಸದಸ್ಯ ರವಿ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಸುಮಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ದಿವ್ಯಾ, ಕೃಷಿ ಅಧಿಕಾರಿ ಅಮರೇಶ್, ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕರಾದ ಅನನ್ಯಾ, ರಶ್ಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net