ಜ್ಞಾನ ನೀಡುವ ಪ್ರತಿಯೊಬ್ಬರೂ ಗುರುಗಳು

ಎನ್.ಆರ್.ಪುರದಲ್ಲಿ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಗುರು ಪೂರ್ಣಿಮೆ ಮಹತ್ವದ ಬಗ್ಗೆ ಆಶೀರ್ವಚನ ನೀಡಿದರು.
ಎನ್.ಆರ್.ಪುರದಲ್ಲಿ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಗುರು ಪೂರ್ಣಿಮೆ ಮಹತ್ವದ ಬಗ್ಗೆ ಆಶೀರ್ವಚನ ನೀಡಿದರು.
Published on
ಎನ್.ಆರ್.ಪುರ: ವಿದ್ಯಾರ್ಥಿಗಳಿಗೆ ಯಾರೂ ಜ್ಞಾನ ನೀಡುತ್ತಾರೋ ಅವರು ಗುರುಗಳಿಗೆ ಸಮನಾಗಿದ್ದಾರೆ ಎಂದು ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಗುರುಪೂರ್ಣಿಮೆ ಅಂಗವಾಗಿ ಸಿಂಹನಗದ್ದೆ ಬಸ್ತಿಮಠದಲ್ಲಿ ಶ್ರೀ ಜ್ವಾಲಾಮಾಲಿನಿ ಶಾಲೆ ವಿದ್ಯಾರ್ಥಿಗಳಿಗೆ ಗುರು ಪೂರ್ಣಿಮೆ ಮಹತ್ವದ ಬಗ್ಗೆ ಆಶೀರ್ವಚನ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಹಿರಿಯರ ಜತೆ ವಿನಯದಿಂದ ನಡೆದುಕೊಳ್ಳಬೇಕು. ಹಿರಿಯರಿಗೆ ಗೌರವ ನೀಡಬೇಕು. ತಂದೆ, ತಾಯಿ ಮೊದಲ ದೇವರು. ನಂತರ ಶಿಕ್ಷಕರು, ಆಯಾ ಧರ್ಮದ ಗುರುಗಳನ್ನು ನಂಬಿ ಅವರ ಅನುಭವ, ಸಲಹೆ ಹಾಗೂ ಆಶೀರ್ವಾದ ಪಡೆಯಬೇಕು ಎಂದರು.
ನಿತ್ಯ ತಂದೆ, ತಾಯಿಗಳ ಪಾದಗಳಿಗೆ ನಮಸ್ಕರಿಸಿ ನಿಮ್ಮ ದೈನಂದಿನ ಕಾರ್ಯ ಪ್ರಾರಂಭಿಸಬೇಕು. ಪಾಪ, ಪುಣ್ಯಗಳ ಬಗ್ಗೆ ಹಿರಿಯರಿಂದ ಕೇಳಿ ತಿಳಿದುಕೊಳ್ಳಬೇಕು. ತಂದೆ, ತಾಯಿ ಹಾಗೂ ಗುರು ಹಿರಿಯರ ಆಶೀರ್ವಾದ ನಿಮಗೆ ಶ್ರೀರಕ್ಷೆಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಹಿತವಚನ ಬೋಧಿಸಿದರು.
ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net