ಕಡೂರು: ಸಮಾಜಮುಖಿಯಾಗಿ ನಿರ್ವಹಣೆಯಿಂದ ಲಯನ್ಸ್ ಸಂಸ್ಥೆ ಸಾರ್ಥಕ ಬದುಕನ್ನು ರೂಪಿಸುತ್ತದೆ ಎಂದು ಜಿಲ್ಲಾ ಜಿಎಂಟಿ ಮುಖ್ಯ ಸಂಯೋಜಕ ಕೆ.ಆರ್.ಮನೋರಂಜನ್ ಹೇಳಿದರು.
ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶ್ರದ್ಧೆ ಮತ್ತು ಅರ್ಪಣೆ ಹಾಗೂ ಕಾರ್ಯವೈಖರಿಯಿಂದ ಲಯನ್ಸ್ ಸಂಸ್ಥೆ ನಮ್ಮನ್ನು ಬೆಳೆಸಲಿದೆ. ಸಂಸ್ಥೆ ಸೇರ್ಪಡೆಯಾಗಿರುವ ಎಲ್ಲ ಸದಸ್ಯರು ಸೇವಾ ಮನೋಭಾವವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ನೆರವಾಗುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಯರದಕೆರೆ ರಾಜಪ್ಪ ಮಾತನಾಡಿ, ಕಡೂರಿನ ಲಯನ್ಸ್ ಸಂಸ್ಥೆಗೆ ತನ್ನದೇ ಆದ ಇತಿಹಾಸ ಮತ್ತು ವೈಶಿಷ್ಟ್ಯತೆ ಇದೆ. ಹಿರಿಯರ ಮಾರ್ಗದರ್ಶನ ಮತ್ತು ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.
ಲಯನ್ಸ್ ಸಂಸ್ಥೆ ನಿರ್ಗಮಿತ ಅಧ್ಯಕ್ಷ ಕೆ.ಎಸ್.ತ್ಯಾಗರಾಜ್, ಬಿ.ಎನ್.ವೆಂಕಟೇಶ್, ಜಿ. ರಮೇಶ್, ಸಿ.ಎನ್.ನರೇಂದ್ರನಾಥ್, ಸತ್ಯನಾರಾಯಣ್, ಬಿ.ಎಸ್.ಸತೀಶ್, ಎಂ.ರಂಗಪ್ಪ, ಎಂ.ಸಿ.ಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಡಿ.ಪ್ರಶಾಂತ್, ಕಂಸಾಗರ ರೇವಣ್ಣ ಮತ್ತಿತರಿದ್ದರು.
ನೂತನ ಪದಾಧಿಕಾಗಳು: ಬಿ.ಎಚ್. ಬಸವರಾಜಪ್ಪ(ಉಪಾಧ್ಯಕ್ಷ), ಡಾ. ಸಿ.ಕೆ. ಮಂಜುನಾಥ್(ಕಾರ್ಯದರ್ಶಿ), ಪಿ.ಧನಂಜಯ(ಕೋಶಾಧಿಕಾರಿ) ಪದಾಧಿಕಾರಿಗಳಾಗಿ ಪದಗ್ರಹಣ ಸ್ವೀಕರಿಸಿದರು.