ಬದಲಾಗುತ್ತಿರುವ ಉದ್ಯೋಗವನ್ನು ಎಲ್ಲರು ಒಪ್ಪಿಕೊಳ್ಳಬೇಕಾಗಿದೆ

ಚಿಕ್ಕಮಗಳೂರು ಹನುಮಂತಪ್ಪ ವೃತ್ತದಲ್ಲಿ ಅಕ್ಷಯ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್  ವತಿಯಿಂದ ಏರ್ಪಡಿಸಲಾಗಿದ್ದ ನೂತನ ಅಕ್ಷಯ ಕ್ಯಾರಿಯರ್ ಅಕಾಡೆಮಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಉದ್ಘಾಟಿಸಿದರು.
ಚಿಕ್ಕಮಗಳೂರು ಹನುಮಂತಪ್ಪ ವೃತ್ತದಲ್ಲಿ ಅಕ್ಷಯ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಅಕ್ಷಯ ಕ್ಯಾರಿಯರ್ ಅಕಾಡೆಮಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಉದ್ಘಾಟಿಸಿದರು.
Published on
ಚಿಕ್ಕಮಗಳೂರು: ಚಿಕ್ಕಮಗಳೂರು-ಹಿಂದೆ ಕುಲಕಸುಬನ್ನು ಸೀಮಿತ ಜಾತಿಯವರೇ ಮಾಡಬೇಕೆಂಬ ನಿಯಮವಿತ್ತು. ಈಗ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಬದಲಾಗಿರುವುದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಬೇಕಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ತಿಳಿಸಿದರು.
ನಗರದ ಹನುಮಂತಪ್ಪ ವೃತ್ತದಲ್ಲಿ ಅಕ್ಷಯ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಅಕ್ಷಯ ಕ್ಯಾರಿಯರ್ ಅಕಾಡೆಮಿ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಬದುಕಿನಿಂದ ಬಂದವರು ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೋಂದು ಆಸಕ್ತಿ ವಹಿಸುತ್ತಿರುವುದು ಶ್ಲಾಘನೀಯ. ಪುತ್ತೂರಿನಿಂದ ಚಿಕ್ಕಮಗಳೂರಿಗೆ ಬಂದು ಈ ಭಾಗದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಜಾಬ್ ಓರಿಯೆಂಟೆಡ್ ಕೋರ್ಸ್ ಬಗ್ಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬಡವರು, ಕೃಷಿ ಕುಟುಂಬದ, ಗ್ರಾಮೀಣ ಭಾಗದ ಮಕ್ಕಳು ತುಂಬಾ ಪ್ರತಿಭಾವಂತರಾಗಿದ್ದಾರೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಉತ್ತಮ ಫಲಿತಾಂಶ ಪಡೆದಿರುವ ಇವರಿಗೆ ಈ ಕಾಲೇಜಿನಲ್ಲಿ ೬ ತಿಂಗಳು ಮತ್ತು ೧ ವರ್ಷ ತರಬೇತಿ ನೀಡಿ ಆದಾಯ ಗಳಿಸುವುದರ ಜೊತೆಗೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಶಕ್ತಿ ತುಂಬುತ್ತೇವೆ ಎಂಬ ಭರವಸೆ ನೀಡುತ್ತಿರುವುದು ಉತ್ತಮವಾಗಿದೆ ಎಂದು ಹೇಳಿದರು.
ಮೊದಲು ೧೭ ವಿದ್ಯಾರ್ಥಿಗಳಿಂದ ಆರಂಭಿಸಿದ ಅಕ್ಷಯ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟಷನ್ ನಲ್ಲಿ ಇಂದು ೧೦೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಫ್ಯಾಷನ್ ಡಿಸೈನರ್, ಜೆಓಸಿ, ಹೋಟೆಲ್ ಮ್ಯಾನೇಜ್‌ಮೆಂಟ್ ಮುಂತಾದ ವೃತ್ತಿಪರ ಕೋರ್ಸ್ಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಕುಟುಂಬ ನಿರ್ವಹಣೆಯ ಜವಾಬ್ದಾರಿ ಬಂದಾಗ ಬ್ಯೂಟಿಷಿಯನ್, ಫ್ಯಾಷನ್ ಡಿಸೈನರ್ ಮುಂತಾದ ಕಸುಬುಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿ ಆರ್ಥಿಕ ಶಕ್ತಿಯಾಗಲಿವೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಪಲ್ಲವಿ ಸಿ.ಟಿ.ರವಿ ಮಾತನಾಡಿ ಇಂದು ಮಲ್ಟಿಪಲ್ ಕೋರ್ಸ್ಗಳು ವಿದ್ಯಾರ್ಥಿಗಳಲ್ಲಿ ಉದ್ಯೋಗದ ಭರವಸೆ ತುಂಬುತ್ತಿವೆ, ಹಿಂದೆ ದ್ವಿತೀಯ ಪಿಯುಸಿ ಮುಗಿಸಿದರೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕಳುಹಿಸುತ್ತಿದ್ದರು, ಇಲ್ಲ ಮುಂದೆ ವ್ಯಾಸಂಗ ಮಾಡುವುದಾದರೆ ಕಲಾ, ವಾಣಿಜ್ಯ, ವಿಜ್ಞಾನ ಈ ಮೂರು ಕೋರ್ಸ್ಗಳು ಮಾತ್ರ ಇದ್ದವು ಎಂದು ಸ್ಮರಿಸಿದರು.
ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ದೊರೆಯುವ ವೃತ್ತಿಪರ ಕೋರ್ಸ್ಗಳ ತರಬೇತಿಯನ್ನು ಪಡೆದು ಸ್ವ-ಉದ್ಯೋಗ ಸ್ಥಾಪಿಸಿ ಎಂದು ಕರೆ ನೀಡಿದರು.
ಅಕ್ಷಯ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ನಿರ್ದೇಶಕ ಅಭಿಲಾಷ್ ಮಾತನಾಡಿ ೨೦೧೯ ರಲ್ಲಿ ಪುತ್ತೂರಿನಲ್ಲಿ ಬಿಎಸ್‌ಇ ಫ್ಯಾಷನ್ ಡಿಸೈನ್‌ನಿಂದ ಪ್ರಾರಂಭಗೊಂಡು ೨೦೨೫ ರಲ್ಲಿ ಪಿಯುಸಿ ತರಗತಿಯ ಜೊತೆಗೆ ಎಐ ಸೆಕ್ಯೂರಿಟಿ ಮತ್ತು ಡಾಟಾ ಎನರ್ಜಿಟಿಕ್ಸ್ ಕೋರ್ಸ್ಗಳನ್ನು ಸಹ ಪ್ರಾರಂಭಿಸಲಾಗಿದೆ ಹಾಗೂ ಪಾಲಕರ ಮನವಿ ಮೇರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ಷಯ್ ಕ್ಯಾರಿಯರ್ ಅಕಾಡೆಮಿ ಪ್ರಾರಂಭಿಸಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೋಮಾ ಕೋರ್ಸ್ಗಳನ್ನು ಕೊಡಲಾಗುತ್ತಿದೆ ಎಂದ ಅವರು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಮಾಲೀಕರಾದ ವಿಜಯ್ ಕುಮಾರ್, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಕೆ.ರಾಜು, ರಾಜಪ್ಪ, ವ್ಯವಸ್ಥಾಪಕಿ ಕಲಾವತಿ ಜಯಂತ್ ಮತ್ತಿತರರು ಉಪಸ್ಥಿತರಿದ್ದರು. ಅಕ್ಷಯ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ ಅಧ್ಯಕ್ಷ ಜಯಂತ್ ಸ್ವಾಗತಿಸಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net