ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

ಚಿಕ್ಕಮಗಳೂರಿನ ಸೈಂಟ್‌ ಮೆರೀಸ್‌ ಪದವಿ ಪುರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಸಸಿ ನೆಟ್ಟರು.
ಚಿಕ್ಕಮಗಳೂರಿನ ಸೈಂಟ್‌ ಮೆರೀಸ್‌ ಪದವಿ ಪುರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಸಸಿ ನೆಟ್ಟರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳು ಅವರವರ ಮನೆಯಂಗಳದಲ್ಲಿ ಕನಿಷ್ಟ ಒಂದೊಂದು ಗಿಡ ನೆಟ್ಟು ಪೋಷಿಸಿ
  • ಸೈಂಟ್ ಮೆರೀಸ್‌ ಶಾಲೆಯ ಮುಖ್ಯಸ್ಥ ಡಾ.ಗ್ರೆಗರಿ ಲೋಬೊ ಕಿವಿ ಮಾತು
ಚಿಕ್ಕಮಗಳೂರು: ಪರಿಸರದ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು ಅವರವರ ಮನೆಯಂಗಳದಲ್ಲಿ ಕನಿಷ್ಟ ಒಂದೊಂದು ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ನೈಜ ಅರ್ಥ ತುಂಬಬೇಕು ಎಂದು ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಸ್ಥ ಡಾ.ಗ್ರೆಗರಿ ಲೋಬೊ ಕಿವಿ ಮಾತು ಹೇಳಿದರು.
ನಗರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ-ಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಸರದ ಸಂರಕ್ಷಣೆಯ ಮಹತ್ವ, ಗಿಡ-ಮರಗಳಿಂದ ಉಂಟಾಗುವ ಅನುಕೂಲ ಮತ್ತು ಇಂದಿನ ಪರಿಸ್ಥಿತಿಗಳ ಗಂಭೀರ ಆಲೋಚನೆಗೆ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಲು ಕರೆ ನೀಡಿದರು.
ಕಳೆದ ಶುಕ್ರವಾರ ಕಾಲೇಜು ಆವರಣದಲ್ಲಿ ಗಿಡ ನಡೆವುದರ ಮೂಲಕ ಪ್ರಾರಂಭಗೊಂಡು ಸಮೀಪದಲ್ಲೇ ಇರುವ ಸಾವಯವ ಕೃಷಿತಜ್ಞ ಚಂದ್ರಶೇಖರ ನಾರಾಣಾಪುರ ಅವರ ತೋಟಕೆ ವಿದ್ಯಾರ್ಥಿಗಳು ಚೀಟಿ ನೀಡಿದರು. ಈ ಸಂಧರ್ಭದಲ್ಲಿ ಚಂದ್ರಶೇಖರ್‌ ಅವರಿಂದ ಸಾವಯವ ಕೃಷಿಯ ಮಹತ್ವ, ಜಾಗತಿಕ ತಾಪಮಾನದ ಕುರಿತು ಅರಿವು, ಯುವ ಜನತೆಯ ಪಾತ್ರದ ಕುರಿತಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ನಂತರದಲ್ಲಿ ವಿದ್ಯಾರ್ಥಿಗಳಿಂದ ಕಸಮುಕ್ತ ಆವರಣ ನಿರ್ಮಾಣಕ್ಕೆ ಶ್ರಮದಾನ ಮಾಡಿಸಿ ಈ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನಾಚರಣೆಯನ್ನು ಕಾಲೇಜಿನ ಸಮಸ್ತ ಉಪನ್ಯಾಸಕರೊಂದಿಗೆ ಆಚರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net