ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ

ಚಿಕ್ಕಮಗಳೂರಿನ ಎಐಟಿ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ಧ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಸಸಿ ನೆಡುವ ಮೂಲಕ ಉದ್ಘಾಟಿಸಿದರು.
ಚಿಕ್ಕಮಗಳೂರಿನ ಎಐಟಿ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ಧ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಸಸಿ ನೆಡುವ ಮೂಲಕ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕೃತಿಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಜವಬ್ದಾರಿಯನ್ನು ಎಲ್ಲರೂ ಹೊರಬೇಕು
ಚಿಕ್ಕಮಗಳೂರು: ಪರಿಸರ ರಕ್ಷಿಸುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯ. ಪ್ರಕೃತಿಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಜವಬ್ದಾರಿಯನ್ನು ಎಲ್ಲರೂ ಹೊರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಎಐಟಿ ಕಾಲೇಜು ಆವರಣದಲ್ಲಿ ಅರಣ್ಯ ಇಲಾಖೆ, ಎನ್‌ಸಿಸಿ, ಎನ್‌ಎಸ್‌ಎಸ್ ಘಟಕ ಹಾಗೂ ಎಐಟಿ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ಧ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪರಿಸರ ಹಾಳಾಗಲು ಪ್ರಮುಖ ಕಾರಣ ಪ್ಲಾಸ್ಟಿಕ್ ವಸ್ತುಗಳು. ಹೀಗಾಗಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಸಬಾರದು. ಅಲ್ಲದೇ ಪ್ರಕೃತಿಯಿಂದ ಲಭಿಸುವ ಮಳೆ ನೀರನ್ನು ವ್ಯರ್ಥಗೊಳಿಸದೆ ಶೇಖರಿಸಿ ಕೃಷಿ ಚಟುವಟಿಕೆಗೆ ಬಳಸಿದರೆ ಪರಿಸರ ಉತ್ತಮವಾಗಲಿದೆ ಎಂದರು.
ಮನೆ ಅಥವಾ ಕಚೇರಿಗಳಲ್ಲಿ ಸಸಿ ನೆಡುವುದರ ಜೊತೆಗೆ ಪೋಷಿಸುವ ಕಾರ್ಯ ಸಾರ್ವಜನಿಕರು ಮಾಡಬೇಕಿದೆ. ಪರಿಸರ ಉಳಿದರೆ, ನಾವು ಉಳಿದೆವು ಎಂಬ ಸತ್ಯವನ್ನು ಅರಿತು ಮುಂದೆ ಸಾಗಬೇಕಿದೆ ಎಂದು ತಿಳಿಸಿದರು.
ಎಐಟಿ ಕಾಲೇಜು ಪ್ರಾಚಾರ್ಯ ಡಾ. ಎಂ.ಎ.ಗೌತಮ್ ಮಾತನಾಡಿ, ಪರಿಸರ ನಮ್ಮೆಲ್ಲರ ಅದ್ಬುತವಾದ ಆಸ್ತಿ. ಈ ಪ್ರಕೃತಿ ಸಂಪತ್ತನ್ನು ನಾವು ಸೂಕ್ತ ರೀತಿಯಲ್ಲಿ ನಿರ್ವಹಿಸಿ, ರಕ್ಷಿಸುವ ಕಾರ್ಯ ಮಾಡಿಕೊಳ್ಳಬೇಕು. ಮನುಷ್ಯನಂತೆ ಮರ ಗಿಡಗಳಿಗೂ ಜೀವವಿದೆ. ಹಾಗಾಗಿ ಹೆಚ್ಚಿನ ಸಸಿ ನೆಟ್ಟು ಪೋಷಿಸಬೇಕು ಎಂದು ಹೇಳಿದರು.
ಚಿಕ್ಕಮಗಳೂರು ವಿಭಾಗದ ಡಿಎಫ್‌ಓ ಕೆ.ಟಿ.ಬೋರಯ್ಯ ಮಾತನಾಡಿ, ಅರಣ್ಯ ಸಂಪತ್ತು ಹಾಗೂ ನಾಡಿನ ಪ್ರಕೃತಿ ಸಂಪತ್ತನ್ನು ಯಾರೂ ಹಾಳು ಮಾಡಬಾರದು. ಪ್ರಕೃತಿಗೆ ಹಾನಿಯಾದರೆ ಮನುಷ್ಯನ ಬದುಕು ದುಸ್ತರವಾಗಲಿದೆ. ಅಲ್ಲದೇ ನೈಸರ್ಗಿಕ ವಾತಾವರಣ, ಆಮ್ಲಜನಕ ಕೊರತೆಯಾಗಿ ಜೀವಿಸುವುದೇ ಕಷ್ಟ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಸಾಮಾಜಿಕ ಅರಣ್ಯ ವಿಭಾಗದ ಆನಂದ್, ಎನ್‌ಸಿಸಿ ಸಂಯೋಜಕ ಡಾ. ಎಚ್.ಪಿ.ವಿನೀತ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net