ಕುನ್ನಳ್ಳಿ ಗ್ರಾಮದ ಸ್ಮಶಾನ ಜಾಗ ಒತ್ತುವರಿ ಖುಲ್ಲಾಗೊಳಿಸಿ

ಸ್ಮಶಾನ ಜಾಗ ಒತ್ತುವರಿ ತೆರವಿಗೆ ಒತ್ತಾಯಿಸಿ ಕುನ್ನಳ್ಳಿ ಗ್ರಾಮದ ಅಂಬೇಡ್ಕರ್ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಸ್ಮಶಾನ ಜಾಗ ಒತ್ತುವರಿ ತೆರವಿಗೆ ಒತ್ತಾಯಿಸಿ ಕುನ್ನಳ್ಳಿ ಗ್ರಾಮದ ಅಂಬೇಡ್ಕರ್ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.
Published on
ಮೂಡಿಗೆರೆ: ಕುನ್ನಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿರುವ ಸ್ಮಶಾನ ಜಾಗ ಖುಲ್ಲಾಗೊಳಿಸಬೇಕು ಹಾಗೂ ನಿವೇಶನ ಒದಗಿಸುವಂತೆ ಒತ್ತಾಯಿಸಿ ಕೆಲ್ಲೂರು ಗ್ರಾಮದ ಅಂಬೇಡ್ಕರ್ ನಗರ ನಿವಾಸಿಗಳು ಶುಕ್ರವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭನಟನೆ ನಡೆಸಿದರು.
ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಕೆಲ್ಲೂರು ಗ್ರಾಮದ ಸರ್ವೇ ನಂ.82ರಲ್ಲಿ ಹಾಗೂ ಕುನ್ನಳ್ಳಿ ಗ್ರಾಮದ ಸರ್ವೇ ನಂ.1ರ ಅಂಬೇಡ್ಕರ್ ನಗರದಲ್ಲಿ ತಲಾ ಒಂದು ಎಕರೆ ಸ್ಮಶಾನಭೂಮಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಮೃತದೇಹವನ್ನು 5 ಕಿ.ಮೀ ದೂರದ ಬೀಜುವಳ್ಳಿ ಗ್ರಾಮದ ಚಿತಾಗಾರಕ್ಕೆ ಕೊಂಡೊಯ್ಯಬೇಕಾಗಿದೆ. ಒತ್ತುವರಿ ಮಾಡಿರುವ ಸ್ಮಶಾನ ಭೂಮಿ ಖುಲ್ಲಾಗೊಳಿಸಿಕೊಡುವಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕೂಡಲೇ ಸ್ಮಶಾನ ಜಾಗ ಖುಲ್ಲಾಗೊಳಿಸದಿದ್ದರೆ ಪ್ರತಿಭಟನೆ ಸ್ವರೂಪ ಬದಲಾಯಿಸಲಾಗುವುದು. ಗ್ರಾಮದಲ್ಲಿ ಮೃತಪಟವರ  ಮೃತದೇಹವನ್ನು ತಾಲೂಕು ಕಚೇರಿ ಎದುರು ತಂದು ಪ್ರತಿಭಟನೆ ನಡೆಸಬೇಕಾಗುತ್ತದೆ. ಅಧಿಕಾರಿಗಳು ಕೂಡಲೇ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಕೆಲ್ಲೂರು ಗ್ರಾಮದ ಸರ್ವೇ ನಂ.82 ರಲ್ಲಿ 4.38 ಎಕರೆ  ಹಾಗೂ ಕುನ್ನಳ್ಳಿ ಗ್ರಾಮದ ಸರ್ವೇ ನಂ.1ರಲ್ಲಿ ಕಾಯ್ದಿರಿಸಿರುವ ಜಾಗವನ್ನು ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಮಾಡಿ ಹಂಚಬೇಕು. ನೈಜ ಫಲಾನುಭವಿಗಳು ನಿವೇಶನವಿಲ್ಲದೆ ಕಾಫಿ ತೋಟದ ಕೂಲಿ ಲೈನ್ ಮತ್ತು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ 20 ವರ್ಷದಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾದು ಕುಳಿತಿದ್ದಾರೆ. ಕೂಡಲೆ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. 
ಗ್ರಾಪಂ ಮಾಜಿ ಸದಸ್ಯ ಪೂವಪ್ಪ, ಶೇಖರ್, ಹರೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net