ಹೊರ ಗುತ್ತಿಗೆ ನೌಕರರಿಗೆ ಸೌಕರ್ಯ ಒದಗಿಸಲು ಶ್ರಮ

ಮೂಡಿಗೆರೆಯಲ್ಲಿ ಸರ್ಕಾರಿ ಹೊರ ಗುತ್ತಿಗೆ ನೌಕರರ ಸಂಘದಿಂದ ಏರ್ಪಡಿಸಿದ್ದ ಕುಂದು ಕೊರತೆ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದರು. ಬಿ.ಎಲ್.ಶೈಲಾ,  ಗಿರೀಶ್,  ಮಣಿಕುಮಾರ್, ಮಣಿಕಂಠ ಇದ್ದರು.
ಮೂಡಿಗೆರೆಯಲ್ಲಿ ಸರ್ಕಾರಿ ಹೊರ ಗುತ್ತಿಗೆ ನೌಕರರ ಸಂಘದಿಂದ ಏರ್ಪಡಿಸಿದ್ದ ಕುಂದು ಕೊರತೆ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದರು. ಬಿ.ಎಲ್.ಶೈಲಾ, ಗಿರೀಶ್, ಮಣಿಕುಮಾರ್, ಮಣಿಕಂಠ ಇದ್ದರು.
Published on
ಮೂಡಿಗೆರೆ: ಹೊರ ಗುತ್ತಿಗೆದಾರರಿಗೆ ಕನಿಷ್ಟ ವೇತನ ನೀಡಲು ಸರ್ಕಾರ ನಿರ್ಧರಿಸಿದ್ದು, ಅದನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಲ್.ಮಂಜುನಾಥ್ ಮನವಿ ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದಿಂದ ಏರ್ಪಡಿಸಿದ್ದ ಹೊರ ಗುತ್ತಿಗೆದಾರರ ಕುಂದುಕೊರತೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾನ ವೇತನವಿಲ್ಲದೆ ಕಡಿಮೆ ವೇತನದ ಜತೆಗೆ ಉದ್ಯೋಗ ಭದ್ರತೆ ಇಲ್ಲ. ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ. ಪಿಎಫ್, ಇಎಸ್‌ಐ ವೈದ್ಯಕೀಯ ಸೌಲಭ್ಯ,ರಜೆ ಮುಂತಾದ ಹಕ್ಕುಗಳು ಸಿಗುತ್ತಿಲ್ಲ. ಭವಿಷ್ಯದ ಭದ್ರತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಸಂಕಷ್ಟದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಹೊರ ಗುತ್ತಿಗೆದಾರ ಸರ್ಕಾರ ಮತ್ತು ಇಲಾಖೆಗಳ ಆಧಾರ ಸ್ತಂಭವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ನನಗೆ ಹೊರ ಗುತ್ತಿಗೆದಾರರ ಮೇಲೆ ನನಗೆ ಕಾಳಜಿ ಇದೆ. ಸರ್ಕಾರ ಕನಿಷ್ಟ ವೇತನ ಜಾರಿ ಮಾಡಲು ಕ್ಯಾಬಿನೆಟ್‌ನಲ್ಲಿ ಪಾಸ್‌ದ ಮೇಲೆ ಅದು ಕಾರ್ಯರೂಪಕ್ಕೆ ಬಂದೇ ಬರುತ್ತದೆ. ಜತೆಗೆ ಹೊರ ಗುತ್ತಿಗೆದಾರರಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಸರ್ಕಾರಿ ಹೊರ ಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಬಿ.ಎಲ್.ಶೈಲಾ, ಜಿಲ್ಲಾ ಉಪಾಧ್ಯಕ್ಷ ಗಿರೀಶ್, ಗೌರವಾಧ್ಯಕ್ಷ ಮಣಿಕುಮಾರ್, ಕಳಸ ಘಟಕದ ಉಪಾಧ್ಯಕ್ಷ ಮಣಿಕಂಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್, ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್, ಕಾರ್ಯದರ್ಶಿ ಭಾರ್ಗವಿ, ಜೀವಿತಾ, ರಘು, ಕಲಾ ರವಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net