ನಾಡಪ್ರಭು ಕೆಂಪೇಗೌಡರಿಂದ ಸಮರ್ಥ ಅಡಳಿತ

ಕೆಂಚಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ  ವಿತರಿಸಲಾಯಿತು
ಕೆಂಚಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
Published on
ತರೀಕೆರೆ: ನಾಡಪ್ರಭು ಕೆಂಪೇಗೌಡರು 500 ವರ್ಷಗಳ ಹಿಂದೆಯೇ ಸಮರ್ಥ ಆಡಳಿತ ನಡೆಸಿ ಜನಕಲ್ಯಾಣ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದರು ಎಂದು ತಾಲೂಕು ಚುಂಚಶ್ರೀ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರಾಜೇಶ್ವರಿ ಹೇಳಿದರು.
ಕೆಂಚಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಹಿನ್ನೆಲೆಯಲ್ಲಿ ತಾಲೂಕು ಚುಂಚಶ್ರೀ ಮಹಿಳಾ ಒಕ್ಕಲಿಗರ ಸಂಘದಿಂದ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ನಾಡಪ್ರಭು ದೂರದೃಷ್ಠಿ ಇಟ್ಟು ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದರಿಂದ ಇಂದು ಮಹಾನಗರಿ ವಿಶ್ವದ ಗಮನ ಸೆಳೆಯಲು ಸಾಧ್ಯವಾಗಿದೆ ಎಂದರು.
ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಸಂಘ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದು ಮುಂದೆ ಮತ್ತಷ್ಟು ಜನಮುಖಿ ಸೇವೆ ನಿರೀಕ್ಷಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಗಾನವಿ(ಪ್ರಥಮ), ಶ್ರಾವ್ಯ ಮತ್ತು ಇಶ್ಯಾತ್ (ದ್ವಿತೀಯ), ಕೃಪ ಹಾಗೂ ಮಾನ್ಯತ (ತೃತೀಯ) ಬಹುಮಾನ ಪಡೆದರು. ಶಿಕ್ಷಕರಾದ ಎನ್.ರೂಪ, ಶೇಖರಪ್ಪ, ಚುಂಚ ಶ್ರೀ ಮಹಿಳಾ ಒಕ್ಕಲಿಗರ ಸಂಘದ ನಿರ್ದೇಶಕಿ ಜಯಲಕ್ಷ್ಮೀ, ಮಮತಾ, ಪದ್ಮ ಶ್ರೀ, ಕೆಂಚಿಕೊಪ್ಪ ಘಟಕದ ಅಧ್ಯಕ್ಷೆ ಶ್ರೀಲೇಖಾ, ಪ್ರಮುಖರಾದ ಲತಾ, ಶ್ರುತಿ, ಉಮಾ, ಸುಶೀಲ, ನಾಗರತ್ನ, ಪ್ರತಿಮಾ, ಮೀನಾಕ್ಷಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net