ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಏರ್ಪಡಿಸಲಾಗಿರುವ ಚಿಕ್ಕಮಗಳೂರು ಇತಿಹಾಸ ದಾಖಲೆ ಕುರಿತ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಯ್ಸಳ ಮತ್ತು ಚೋಳರ ಕಾಲದ ಪುರಾತನ ದೇವಾಲಯ, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದ ಹೋರಾಟಗಾರರು ಹಾಗೂ ಜಿಲ್ಲೆಯ ಐತಿಹಾಸಿಕ ದಾಖಲೆಗಳ ಬಗ್ಗೆ ವಿದ್ಯಾರ್ಥಿಗಳು ಅರಿತು ಕೊಳ್ಳಬೇಕು ಎಂದರು.
ಮಲೆನಾಡು ಹಾಗೂ ಬಯಲುಸೀಮೆ ಹೊಂದಿಕೊಂಡಿರುವ ಜಿಲ್ಲೆ ತನ್ನದೇಯಾದ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳ ಬಗ್ಗೆ ಜ್ಞಾನಾರ್ಜನೆಗೆ ಅನುಕೂಲವಾಗಲು ರಾಷ್ಟಿçÃಯ ಮಟ್ಟದ ವಿಚಾರ ಸಂಕಿರಣ ಜೀವನದ ಒಂದು ಭಾಗವಾಗಬೇಕು ಎಂದು ತಿಳಿಸಿದರು.
ಸ್ವಾತಂತ್ರ ಚಳವಳಿ ವೇಳೆ ಮಹಾತ್ಮಗಾಂಧೀಜಿ ೧೯೨೭ರ ಜನವರಿ ತಿಂಗಳಿನಲ್ಲಿ ಜಿಲ್ಲೆಗೆ ಭೇಟಿ ನೀಡಿರುವುದು ದೊಡ್ಡ ಇತಿಹಾಸ. ಮುಂಬರುವ ಜನವರಿಗೆ ಗಾಂಧೀಜಿ ಭೇಟಿ ನೀಡಿ ಶತಮಾನೋತ್ಸವದ ಹಿನ್ನೆಲೆಯಲ್ಲಿ ಬೃಹತ್ ಮಟ್ಟದ ಕಾರ್ಯಕ್ರಮ, ಜಾಥಾ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಹತ್ಮರ ಜೀವನ ಚರಿತ್ರೆ ಪರಿಚಯಿಸಲಾಗುವುದು ಎಂದರು.
ಯುಗದ ಕವಿ ಕುವೆಂಪು ಅವರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದಲ್ಲಿ ಜನಿಸಿದವರು. ಜೊತೆಗೆ ಜಿಲ್ಲೆಯ ಕಾಫಿ ಇಡೀ ಪ್ರಪಂಚಕ್ಕೆ ಹೆಸರುವಾಸಿಯಾಗಿದೆ. ಬೆಳವಾಡಿ ಗ್ರಾಮದ ವೀರನಾರಾಯಣ ಸ್ವಾಮಿ, ಉದ್ಬವ ಗಣಪತಿ ಹಾಗೂ ಅಮೃತೇಶ್ವರ ದೇವಾಲಯ ಪೂರ್ವಿಕರ ಇತಿಹಾಸವನ್ನು ತಿಳಿಸುತ್ತದೆ ಎಂದು ಹೇಳಿದರು.
ಸಾವಿರಾರು ವರ್ಷಗಳ ಇತಿಹಾಸವುಳ್ಳ ಹಿರೇಮಗಳೂರು ಕೋದಂಡರಾಮಚಂದ್ರ ಸ್ವಾಮಿ, ನಗರದ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಮರ್ಲೆ ಗ್ರಾಮದಲ್ಲಿ ಕಲ್ಲಿನಿಂದಲೇ ನಿರ್ಮಿಸಿರುವ ಪುರಾತನ ದೇವಾಲ ಯ ಜಿಲ್ಲೆಯ ಸೊಗಬನ್ನು ಇನ್ನಷ್ಟು ಹೆಚ್ಚಿಸಿದೆ. ವಿಶೇಷವಾಗಿ ರಾಜ್ಯದಲ್ಲೇ ಅತ್ಯಂತ ದೊಡ್ಡ ಶಿಖರ ಮುಳ್ಳಯ್ಯ ನಗಿರಿ ಜಿಲ್ಲೆಯ ಸೌಂದರ್ಯವನ್ನು ಬಲಗೊಳಿಸಿದೆ ಎಂದರು.
ಮನುಷ್ಯ ಉದ್ಯೋಗ ಅರಸಿ ದೇಶ, ವಿದೇಶಗಳಿಗೆ ತೆರಳಿದರೂ ಮೂಲ ಸ್ಥಾನವನ್ನು ಮರೆಯದೇ, ಸ್ಥಳದ ಮಹಿಮೆಯನ್ನು ಎಲ್ಲೆಡೆ ಪಸರಿಸಬೇಕು. ಇಡೀ ಪ್ರಪಂಚದಲ್ಲಿ ಭಾರತ ದೇಶ ಹಾಗೂ ಆಯಾ ಜಿಲ್ಲೆಯಲ್ಲಿ ಜನಿಸಿದ ಪ್ರತಿಯೊಬ್ಬರಿಗೆ ಯೋಗ್ಯವಾದ ಜೀವನ ಅಲ್ಲಿಯೇ ಲಭ್ಯವಾಗಲಿದೆ ಎಂದು ತಿಳಿಸಿದರು.
ಪುರಾತತ್ವ ಎ.ಎಸ್.ಐ. ಉಪ ಅಧೀಕ್ಷಕ ಡಾ. ಎಚ್.ಆರ್.ದೇಸಾಯಿ ಮಾತನಾಡಿ, ಜಿಲ್ಲೆ ಪ್ರವಾಸಿ ಆಸಕ್ತಿಯ ವಿವಿಧ ಸ್ಥಳಗಳನ್ನು ಹೊಂದಿದೆ. ಎತ್ತರದ ಬೆಟ್ಟಗಳು, ವೇಗವಾಗಿ ಹರಿಯುವ ಮತ್ತು ಅಂಕುಡೊಂಕಾದ ನದಿಗಳು, ವಿವಿಧ ಧರ್ಮಯಾತ್ರಾ ಕೇಂದ್ರ, ವೈವಿಧ್ಯಮಯ ಪಕ್ಷಿ ಜೀವನ, ನಿತ್ಯಹರಿದ್ವರ್ಣ ಕಾಡು, ಜಾನಪದ ಸಂಪ್ರದಾಯಗಳನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಡಿಎಸ್‌ಜಿ ಕಾಲೇಜಿನ ಪ್ರಾಚಾರ್ಯೆ ತಸ್ನೀಮ್ ಕೌಸರ್ ಮನಿಯಾರ್, ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ವಿಶೇಷತೆಯನ್ನು ಹೊಂದಿದೆ. ಪೂರ್ವಿಕರ ಪುರಾತನ ಶಾಸನ, ಹೊಯ್ಸಳರ ಆಳ್ವಿಕೆಯಲ್ಲಿ ಕೆತ್ತಲಾದ ಕಲ್ಲಿನ ಶಿಲೆಗಳು ಜಿಲ್ಲೆಯ ಸಮಗ್ರವಾದ ಇತಿಹಾಸವನ್ನು ಪರಿಚಯಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಐಕ್ಯೂಎಸ್‌ಸಿ ಕೋಆರ್ಡಿನೇಟರ್ ಗೋವರ್ಧನ್, ಮೈಸೂರು ವಿಭಾಗಿಯ ಪತ್ರಾಗಾರ ಕಚೇರಿ ಉಪ ನಿರ್ದೇಶಕ ಎಚ್.ಎಲ್.ಮಂಜುನಾಥ್, ಕಾರ್ಯಕ್ರಮದ ಆಯೋಜಕ ಎಂ.ಲೋಕೇಶ್, ಹಂಪಿ ಸರ್ಕಲ್ ಉಪ ಅಧೀಕ್ಷಕ ಎಸ್.ಎಂ.ದೇವರಾಜ್, ಇತಿಹಾಸ ವಿಭಾಗದ ಮುಖ್ಯಸ್ಥೆ ಪರ್ಜಾನ್ ಪರ್ವೀನ್ ಉಪಸ್ಥಿತರಿದ್ದರು.