ಲಿಂಗದಹಳ್ಳಿಯಲ್ಲಿ ನಡೆದ ಮಾದಕ ವ್ಯಸನ ವಿರೋಧಿ ಜಾಥಾದಲ್ಲಿ ರಾಜಕುಮಾರ್ ಉಕ್ಕಲಿ, ಮಂಜುಳಾಬಾಯಿ, ಬಿ.ವಿ.ಗಿರೀಶ್, ಪ್ರಕಾಶ್, ವಿನೋದ್ ಚೌಹಾಣ್, ನಾಗರಾಜ್, ಶೋಭರಾಜ್ ಇತರರಿದ್ದರು.
Published on:
Copied
Follow Us
ಲಿಂಗದಹಳ್ಳಿ: ಮಾದಕ ವ್ಯಸನದಿಂದ ಲಕ್ಷಾಂತರ ಯುವಜನರು ತಮ್ಮ ಅಮೂಲ್ಯ ಜೀವಗಳನ್ನೇ ಕಳೆದುಕೊಳ್ಳುತ್ತಿದ್ದು ಈ ವಸ್ತುಗಳು ವಿದ್ಯಾರ್ಥಿಗಳಿಗೆ ಸಿಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಲಿಂಗದಹಳ್ಳಿ ಆರಕ್ಷಕ ಠಾಣಾಧಿಕಾರಿ ರಾಜಕುಮಾರ್ ಉಕ್ಕಲಿ ಹೇಳಿದರು.
ಲಿಂಗದಹಳ್ಳಿ ಆರಕ್ಷಕ ಠಾಣೆ, ಕಂದಾಯ ಇಲಾಖಾಧಿಕಾರಿಗಳು ಮತ್ತು ಲಿಂಗದಹಳ್ಳಿ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಮಾದಕ ದ್ರವ್ಯ ವ್ಯಸನ ವಿರೋಧಿ ದಿನಾಚರಣೆಯ ಜಾಥಾದಲ್ಲಿ ಮಾತನಾಡಿದರು.
ದೇಶ, ವಿದೇಶಗಳ ಅಂಚೆ ಪಾರ್ಸಲ್, ಕೋರಿಯರ್ ಪಾರ್ಸಲ್ ಹಾಗೂ ಖಾಸಗಿ ಪಾರ್ಸಲ್‌ಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ. ಯಾವುದೇ ರೀತಿಯ ಅನುಮಾನಗಳಿದ್ದ ಸಂದರ್ಭದಲ್ಲಿ ಅವುಗಳನ್ನು ಕಳುಹಿಸುವವರ ಮತ್ತು ಸ್ವೀಕರಿಸುವವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಜಾಥಾದಲ್ಲಿ ಲಿಂಗದಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ
ಮಂಜುಳಾ ಬಾಯಿ, ಕಂದಾಯ ಇಲಾಖೆ ಅಧಿಕಾರಿಗಳಾದ ಪ್ರಕಾಶ್, ವಿನೋದ್ ಚೌಹಾಣ್, ಎಚ್.ಆರ್.ನಾಗರಾಜ್, ಎಸ್. ಶೋಭರಾಜ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಮಾದಕ ವ್ಯಸನ ವಿರೋಧದ ಬಗ್ಗೆ ಮಾಹಿತಿ ನೀಡಿದರು.
29 ಎಲ್.ಡಿ.ಹೆಚ್. 1: ಲಿಂಗದಹಳ್ಳಿಯಲ್ಲಿ ನಡೆದ ಮಾದಕ ವ್ಯಸನ ವಿರೋಧಿ ಜಾಥಾದಲ್ಲಿ ರಾಜಕುಮಾರ್ ಉಕ್ಕಲಿ, ಮಂಜುಳಾಬಾಯಿ, ಬಿ.ವಿ.ಗಿರೀಶ್, ಪ್ರಕಾಶ್, ವಿನೋದ್ ಚೌಹಾಣ್, ನಾಗರಾಜ್, ಶೋಭರಾಜ್ ಇತರರಿದ್ದರು.