ಬಾಳೆಹೊನ್ನೂರಿನಲ್ಲಿ ವರ್ಷಧಾರೆ

ಬಾಳೆಹೊನ್ನೂರು ಸಮೀಪದ ಬಾಳೆದ್ದೆ ತೂಗು ಸೇತುವೆ ಸಮೀಪದಲ್ಲಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದು.
ಬಾಳೆಹೊನ್ನೂರು ಸಮೀಪದ ಬಾಳೆದ್ದೆ ತೂಗು ಸೇತುವೆ ಸಮೀಪದಲ್ಲಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಭತ್ತದ ನಾಟಿ
  • ಗದ್ದೆಗಳಿಗೆ ನೀರಿನ ಅವಶ್ಯಕತೆ
ಬಾಳೆಹೊನ್ನೂರು: ಬಾಳೆಹೊನ್ನೂರು, ಖಾಂಡ್ಯ, ಮೇಗುಂದಾ ಹೋಬಳಿ ಹಾಗೂ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಶುಕ್ರವಾರ ಆಶ್ಲೇಷ ಮಳೆ  ಅಬ್ಬರ ಜೋರಾಗಿದೆ. ಬೆಳಗ್ಗೆಯಿಂದ ಮಳೆ ಬಿರುಸುಗೊಂಡಿದ್ದು, ದಿನವಿಡೀ ಬಿಡುವು ನೀಡದೆ ಸುರಿದಿದೆ. ಗಾಳಿ ರಭಸವೂ ಹೆಚ್ಚಾಗಿದೆ. 
ಮಲೆನಾಡು ಭಾಗದಲ್ಲಿ ಭತ್ತದ ನಾಟಿ ಭರದಿಂದ ಸಾಗಿದ್ದು, ಭತ್ತದ ಗದ್ದೆಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಮೂರ್ನಾಲ್ಕು ದಿನ ಆಶ್ಲೇಷ ಮಳೆ ಅಬ್ಬರ ಮುಂದುವರಿಯುವ ನಿರೀಕ್ಷೆಯಿದ್ದು, ಪ್ರತಿ ಬಾರಿಯಂತೆ ಶ್ರಾವಣ ಮಾಸ ಆರಂಭ ಹಾಗೂ ನಾಗರಪಂಚಮಿ  ಸಂದರ್ಭದಲ್ಲೂ ಈ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ಕಷಿಕರು. 
ಮಳೆಗೆ ಭದ್ರಾ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾದಂತೆ ಬಯಲು ನಾಡಿನವರಿಗೆ ನಿರೀಕ್ಷೆ, ಸಂತಸಗಳು ಹೆಚ್ಚಾಗಿದ್ದು, ಈ ಭಾಗದಲ್ಲಿ ಭದ್ರಾ ನದಿಯ ನೀರು ಏರಿಕೆಯಾಗಿ ಭದ್ರಾ ಡ್ಯಾಂ ತುಂಬಿದಲ್ಲಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಹಲವು ತಾಲೂಕುಗಳಿಗೆ ಭದ್ರೆಯ ನೀರು ಡ್ಯಾಂನಿಂದ ಬಿಡುಗಡೆಯಾಗಿ ಕಷಿ ಚಟುವಟಿಕೆಗಳನ್ನು ನಡೆಸಲು ಪೂರಕವಾಗಲಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net