ಮತದಾರರ ಪಟ್ಟಿ ಮ್ಯಾಪಿಂಗ್‌ನಿಂದ ಹೊರಗುಳಿಯ ಬೇಡಿ

ಮೂಡಿಗೆರೆ ಬದ್ರಿಯಾ ಮಸೀದಿಯಲ್ಲಿ ನಡೆದ ಈದ್ ಉಲ್ ಫಿತರ್‌ಹಬ್ಬದ ಶುಭಾಶಯ ವಿನಿಮಯ ನಡೆಯಿತು. ಮುಸ್ತಫಾ ಯಮಾನಿ, ಎ.ಎಂ.ಶರೀಫ್ ಹಾಜಿ, ಸಿ.ಕೆ.ಇಬ್ರಾಹಿಂ ಹಾಜಿ, ಎಂ.ಎಸ್.ಇಬ್ರಾಹಿಂ ಹಾಜಿ ಇತರರಿದ್ದರು.
ಮೂಡಿಗೆರೆ ಬದ್ರಿಯಾ ಮಸೀದಿಯಲ್ಲಿ ನಡೆದ ಈದ್ ಉಲ್ ಫಿತರ್‌ಹಬ್ಬದ ಶುಭಾಶಯ ವಿನಿಮಯ ನಡೆಯಿತು. ಮುಸ್ತಫಾ ಯಮಾನಿ, ಎ.ಎಂ.ಶರೀಫ್ ಹಾಜಿ, ಸಿ.ಕೆ.ಇಬ್ರಾಹಿಂ ಹಾಜಿ, ಎಂ.ಎಸ್.ಇಬ್ರಾಹಿಂ ಹಾಜಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರ ರಚಿಸಿರುವ ಕಾಯ್ದೆಗೆ ಗೌರವ ನೀಡಿ
  • ಬದ್ರಿಯಾ ಮಸೀದಿ ಖತೀಬ್ ಮುಸ್ತಫಾ ಯಮಾನಿ ಮನವಿ
ಮೂಡಿಗೆರೆ: ಭಾರತೀಯ ಪ್ರಜೆಯ ಸ್ಥಾನಮಾನ ಗಟ್ಟಿಗೊಳಿಸಲು ಸರ್ಕಾರ ರಚಿಸಿರುವ ಕಾಯ್ದೆಗೆ ಗೌರವ ನೀಡುವ ಮೂಲಕ ಮತದಾರರ ಈಗಿನ ಪಟ್ಟಿಯನ್ನು 2002ರ ಪಟ್ಟಿಯಂತೆ ಮ್ಯಾಪಿಂಗ್ ಮಾಡುವುದರಿಂದ ಯಾರೊಬ್ಬರೂ ಹೊರಗುಳಿಯಬಾರದು ಎಂದು ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಮುಸ್ತಫಾ ಯಮಾನಿ ತಿಳಿಸಿದರು.
ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಶುಕ್ರವಾರ ಈದ್ ಉಲ್ ಫಿತರ್ ಹಬ್ಬದ ಪ್ರಾರ್ಥನೆ ನಂತರ ಮಾತನಾಡಿ, ಭಾರತೀಯ ಪೌರತ್ವವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಹೆಜ್ಜೆ ಇರಿಸಿದೆ. ಸ್ಥಳೀಯ ಪ್ರಜೆಯೆಂದು ಸಾಬೀತುಪಡಿಸಲು ಹಲವಾರು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಪ್ರಾಥಮಿಕವಾಗಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ. ಮ್ಯಾಪಿಂಗ್ ನಿಂದ ಹೊರಗುಳಿದರೆ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಎಸ್‌ಐಆರ್ ಜಾರಿಗೆ ಬರಲಿದೆ. ಆಗ ಮ್ಯಾಪಿಂಗ್ ಕಾರ್ಯ ಇನ್ನಷ್ಟು ಕಠಿಣವಾಗಲಿದೆ. ಈಗ ಸುಲಭ ವಿಧಾನದ ಮೂಲಕ ಮ್ಯಾಪಿಂಗ್ ಕಾರ್ಯ ನಡೆಸಲು ಸರ್ಕಾರದ ಆದೇಶವಿದೆ. ಹಾಗಾಗಿ ಸ್ಥಳೀಯ ಬಿಎಲ್ಒಗಳನ್ನು ಭೇಟಿಯಾಗುವ ಮೂಲಕ ಮ್ಯಾಪಿಂಗ್ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಇಸ್ಲಾಂ ಧರ್ಮ ಎಂದರೆ ದಾನ ಧರ್ಮ ನೀಡುವ ಸಮುದಾಯವಾಗಿದೆ. ಶ್ರೀಮಂತರು ತಮ್ಮ ಆದಾಯ ಮತ್ತು ಆಸ್ತಿ ಅಂತಸ್ತುಗಳ ಮೌಲ್ಯವನ್ನು ರಂಜಾನ್ ಉಪವಾಸ ವ್ರತಾಚರಣೆಯ ಒಂದು ತಿಂಗಳಲ್ಲಿ ಮೌಲ್ಯಮಾಪನ ಮಾಡಿ ಅದಕ್ಕೆ ಇಂತಿಷ್ಟು ಎಂಬಂತೆ ಲೆಕ್ಕಾಚಾರ ಹಾಕಿ ಈದ್ ಉಲ್ ಫಿತರ್ ಹಬ್ಬದ ಮುಂಚಿತವಾಗಿ ಬಡವರಿಗೆ ಕಡ್ಡಾಯವಾಗಿ ದಾನ ನೀಡಬೇಕಾಗಿದೆ. ದಾನ ನೀಡದಿರುವವರ ಸಂಪತ್ತು ಒಳಿತಿನ ಕಡೆಗೆ ಹೆಜ್ಜೆ ಹಾಕಲು ಅಸಾಧ್ಯ. ಅದು ಕೆಡುಕಿನ ಭಾಗದ ಸಂಪತ್ತು ಎಂದು ಗುರುತಿಸಲ್ಪಡುತ್ತದೆ. ದಾನ ಧರ್ಮ ನೀಡುವುದು ಉಳ್ಳವರ ಕರ್ತವ್ಯವಾಗಿದೆ. ಇಲ್ಲವಾದರೆ ಇಹ ಮತ್ತು ಪರಲೋಕದಲ್ಲಿ ವಿಜಯ ಸಾಧಿಸಲು ಹೆಣಗಾಡಬೇಕಾಗುತ್ತದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net