ವೈದ್ಯರು ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಲಿ

ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ  ವೈದ್ಯ ದಿನಾಚರಣೆ ಕಾರ್ಯಕ್ರಮವನ್ನು  ಡಾ.ಸತೀಶ್ ಉದ್ಘಾಟಿಸಿದರು.
ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವೈದ್ಯ ದಿನಾಚರಣೆ ಕಾರ್ಯಕ್ರಮವನ್ನು ಡಾ.ಸತೀಶ್ ಉದ್ಘಾಟಿಸಿದರು.
Published on
ಎನ್.ಆರ್.ಪುರ: ಎಲ್ಲ ವೈದ್ಯರು ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಸೇವೆ ನೀಡಬೇಕು ಎಂದು ಹಿರಿಯ ವೈದ್ಯ ಡಾ.ಸತೀಶ್ ಕರೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಸಾರ್ವಜನಿಕರು ವೈದ್ಯರಲ್ಲಿ ದೇವರನ್ನು ಕಾಣಬೇಕು. ಆರೋಗ್ಯವೇ ಭಾಗ್ಯ. ಆ ಭಾಗ್ಯ ಕರಣಿಸುವ ವೈದ್ಯರ ಸೇವೆ ಮಾದರಿಯಾಗಿರುತ್ತದೆ. ಜೀವ ಉಳಿಸುವ ವೈದ್ಯರ ಕೈ ಬಲಪಡಿಸೋಣ ಎಂದರು.
ವೈದ್ಯ ಡಾ.ವಿವೇಕ್ ಮಾತನಾಡಿ, ಡಾ.ಬಿ.ಸಿ.ರಾಯ್ ವಿಶ್ವ ಕಂಡ ಶ್ರೇಷ್ಠ ವೈದ್ಯರಾಗಿದ್ದರು. ಅವರು ವೈದ್ಯರ ಜತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಹಾತ್ಮಾ ಗಾಂಧೀಜಿ ಉಪಹಾಸ ಸತ್ಯಾಗ್ರಹ ಮಾಡಿದ ಸಂದರ್ಭದಲ್ಲಿ ಬಿ.ಸಿ.ರಾಯ್ ಮಹಾತ್ಮಾ ಗಾಂಧೀಜಿಗೆ ವೈದ್ಯಕೀಯ ಸೇವೆ ಒದಗಿಸಿದ್ದರು. ಬಿ.ಸಿ.ರಾಯ್ ಜುಲೈ 1ರಂದು ಜನಿಸಿದ್ದರು. ಆದ್ದರಿಂದ ಪ್ರತಿ ವರ್ಷ ಜುಲೈ 1ರಂದು ವೈದ್ಯರ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಡಾ.ಎಲ್ದೋಸ್.ಟಿ.ವರ್ಗೀಸ್ ಮಾತನಾಡಿ, ಪ್ರತಿ ವರ್ಷ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರನ್ನು ಗೌರವಿಸುವ ಕೆಲಸ ಮಾಡಲಾಗುತ್ತದೆ. ವೈದ್ಯರು ಸಹನೆಯಿಂದ ತಮ್ಮ ವೃತ್ತಿ ಮಾಡಿ ಜನರ ಪ್ರೀತಿ ಗಳಿಸಬೇಕು ಎಂದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ಪ್ರತಿ 3 ತಿಂಗಳಿಗೊಮ್ಮೆ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಸಭೆ ನಡೆಸಿ ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಚರ್ಚೆ ನಡೆಸಬೇಕು ಎಂದರು.
ಡಾ.ಸುರೇಶ್, ಡಾ.ಪ್ರಸನ್ನಕುಮಾರ್ ಹಾಗೂ ಇತರ ವೈದ್ಯರು ಉಪಸ್ಥಿತರಿದ್ದರು.ಪಿ.ಪಿ.ಬೇಬಿ, ನಾಗಲತ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net