ವೈದ್ಯರು ರೋಗಿಗಳಿಗೆ ಮರುಜನ್ಮ ನೀಡುವ ದೇವರು

ಶೃಂಗೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೀನಿಯರ್ ಚೇಂಬರ್‌ನಿಂದ ವೈದ್ಯರನ್ನು ಗೌರವಿಸಲಾಯಿತು. ಡಾ. ಗಿರೀಶ್, ಶ್ರೀವೇಣಿ, ರತ್ನಾಕರ್ ಇದ್ದರು.
ಶೃಂಗೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೀನಿಯರ್ ಚೇಂಬರ್‌ನಿಂದ ವೈದ್ಯರನ್ನು ಗೌರವಿಸಲಾಯಿತು. ಡಾ. ಗಿರೀಶ್, ಶ್ರೀವೇಣಿ, ರತ್ನಾಕರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಆಸ್ಪತ್ರೆಯಲ್ಲಿ
  • ನಾರಾಯಣನ ಸ್ವರೂಪ
ಶೃಂಗೇರಿ: ರೋಗಿಗಳ ಆರೋಗ್ಯಕ್ಕಾಗಿ ವೈದ್ಯರು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಾರೆ. ಅವರು ಮರುಜನ್ಮ ನೀಡುವ ನಾರಾಯಣನ ಸ್ವರೂಪ ಎಂದು ಸೀನಿಯರ್ ಚೇಂಬರ್ ಅಧ್ಯಕ್ಷ ಮಂಜುನಾಥ ಗೌಡ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸೀನಿಯರ್ ಚೇಂಬರ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.
ರೋಗಿಯ ಅತ್ಯಂತ ಕ್ಷಿಷ್ಟಕರ ಸಮಯದಲ್ಲೂ ಸಂಯಮದಿಂದ ಚಿಕಿತ್ಸೆ ನೀಡಿ ಜೀವ ಉಳಿಸಿ ಅವರಿಗೆ ಹೊಸ ಜೀವನ ನೀಡುವ ವೈದ್ಯರ ಆತ್ಮವಿಶ್ವಾಸ ಬಹಳ ದೊಡ್ಡದು ಎಂದರು.
ಸದಸ್ಯ ಮೋಹನ್ ರಾಜಣ್ಣ ಮಾತನಾಡಿ, ವೈದ್ಯರು ಜ್ಞಾನ, ಮಾನವೀಯತೆಯಿಂದ ಜೀವಗಳಿಗೆ ಹೊಸ ಬದುಕನ್ನು ನೀಡುವ ಮಹನೀಯರು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಕೊಡುಗೆ ಅಪಾರ ಎಂದರು.
ವೈದ್ಯರಾದ ಗಿರೀಶ್, ರತ್ನಾಕರ್, ಶ್ರೀವೇಣಿ ಅವರನ್ನು ಗೌರವಿಸಲಾಯಿತು. ಸೀನಿಯರ್ ಚೇಂಬರ್ ಕಾರ್ಯದರ್ಶಿ ಕೆ.ಟಿ.ಮಂಜುನಾಥ್, ಇನ್ನರ್‌ವ್ಹೀಲ್ ನಿಯೋಜಿತ ಅಧ್ಯಕ್ಷೆ ಡಾ. ಭುವನೇಶ್ವರಿ ಬಲ್ಲಾಳ್, ಕಾರ್ಯದರ್ಶಿ ಪೂರ್ಣಿಮಾ ಸಿದ್ದಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net