ಶುಕ್ರವಾರ ತಹಸೀಲ್ದಾರ್ ಡಾ. ನೂರುಲ್‌ಹುದಾ ಅಧ್ಯಕ್ಷತೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಧ್ಯಕ್ಷರೊಂದಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಆಯೋಜಿಸಿದ್ದ ಸಭೆಯಲ್ಲಿ ಮಾಹಿತಿ ನೀಡಿದರು. ತಾಲೂಕಿನ ವ್ಯಾಪ್ತಿಯಲ್ಲಿ 55,823 ಮತದಾರರಿದ್ದು 54,077 ಮತದಾರರಿಗೆ ಗಣತಿ ನಮೂನೆಗಳನ್ನು ಮನೆಗಳಿಗೆ ತಲುಪಿಸಲಾಗಿದೆ. ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳು ಮತ್ತಿತರ ಸ್ಥಳಗಳಿಗೆ ಹೋಗಲು ಸಾಧ್ಯವಾಗದ ಪ್ರದೇಶದಲ್ಲಿರುವವರ 1,046 ನಮೂನೆಗಳನ್ನು ವಿತರಿಸಿಲ್ಲ. ಈ ಸ್ಥಳಗಳಿಗೆ ಭೇಟಿ ನೀಡಿ ನಮೂನೆ ನೀಡಿ ಅಂದೇ ಮಾಹಿತಿ ತುಂಬಿಸಿಕೊಂಡು ಬರಲಾಗುವುದು ಎಂದರು.