ಅರ್ಹ ಮತದಾರರಿಗೆ ಗಣತಿ ನಮೂನೆ ವಿತರಣೆ ಫೂರ್ಣ

ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ಎಸ್‌ಆರ್‌ಐ ಮಾಹಿತಿ ಸಭೆ ನಡೆಯಿತು.
ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ಎಸ್‌ಆರ್‌ಐ ಮಾಹಿತಿ ಸಭೆ ನಡೆಯಿತು.
Published on
ಎನ್.ಆರ್.ಪುರ: ತಾಲೂಕು ವ್ಯಾಪ್ತಿಯ ಎಲ್ಲ ಅರ್ಹ ಮತದಾರರಿಗೆ ಗಣತಿ ನಮೂನೆ ಫಾರ್ಮ್‌ಗಳನ್ನು ತಲುಪಿಸಲಾಗಿದೆ ಎಂದು ಶೃಂಗೇರಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಪೂರ್ಣಿಮಾ ಮಾಹಿತಿ ನೀಡಿದರು.
ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ತಹಸೀಲ್ದಾರ್ ಡಾ.ನೂರುಲ್‌ಹುದಾ ಅಧ್ಯಕ್ಷತೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಧ್ಯಕ್ಷರೊಂದಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ 55,823 ಮತದಾರರಿದ್ದು 54,077 ಮತದಾರರಿಗೆ ಗಣತಿ ನಮೂನೆಗಳನ್ನು ಮನೆಗಳಿಗೆ ತಲುಪಿಸಲಾಗಿದೆ. ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳು ಮತ್ತಿತರ ಸ್ಥಳಗಳಿಗೆ ಹೋಗಲು ಸಾಧ್ಯವಾಗದ ಪ್ರದೇಶದಲ್ಲಿರುವವರ 1,046 ನಮೂನೆಗಳನ್ನು ವಿತರಿಸಿಲ್ಲ. ಈ ಸ್ಥಳಗಳಿಗೆ ಭೇಟಿ ನೀಡಿ ನಮೂನೆ ನೀಡಿ ಅಂದೇ ಮಾಹಿತಿ ತುಂಬಿಸಿಕೊಂಡು ಬರಲಾಗುವುದು ಎಂದರು.
ಮಾಹಿತಿ ತುಂಬಿಸಿ ಹಿಂದಿರುಗಿಸಿರುವ 12,683 ಗಣತಿ ನಮೂನೆಗಳನ್ನು ಡಿಜಿಟಲಿಕರಣ ಮಾಡಲಾಗಿದೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವವರು, ಬೇರೆ ಊರಿಗೆ ವರ್ಗಾವಣೆಯಾಗಿರುವವರು, ಮರಣಹೊಂದಿದವರು ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು. ಬಿಎಲ್‌ಒಗಳ ಜತೆಗೆ ರಾಜಕೀಯ ಪಕ್ಷದಿಂದ ನೋಂದಾಯಿಸಿರುವ ಬಿಎಲ್‌ಒ2 ಗಳು ಮಾಹಿತಿ ತುಂಬಲು, ಮಾಹಿತಿ ತುಂಬಿದ ನಮೂನೆಗಳನ್ನು ಹಿಂದಿರುಗಿಸಲು ಸಹಾಯ ಮಾಡಬೇಕು. ಇದರಿಂದ ಭರ್ತಿಯಾದ ನಮೂನೆಗಳನ್ನು ಶೀಘ್ರವಾಗಿ ಡಿಜಿಟಲೀಕರಣ ಮಾಡಲು ಸಾಧ್ಯವಾಗುತ್ತದೆ. ಜು.29ರೊಳಗೆ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದ್ದು ಶೀಘ್ರ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದರು.
ತಾಲೂಕು ಜೆಡಿಎಸ್ ಘಟಕದ ಕಾರ್ಯದರ್ಶಿ ವಿಜಯನ್, ಮುಖಂಡ ಚಿನ್ನಯ್ಯಗೌಡ, ಚುನಾವಣಾ ಶಿರಸ್ತರೆದಾರ್ ವೇಣುಗೋಲ, ಸಿಬ್ಬಂದಿ ಸುನಿಲ್, ವಿಧ್ಯಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net