ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ

 ಕಡೂರು ಹೊರವಲಯದಲ್ಲಿರುವ ಪುರಸಭೆ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಜಿಲ್ಲಾಧಿಕಾರಿ ಭಂವರ್‌ಸಿಂಗ್ ಮೀನಾ ಭೇಟಿ ನೀಡಿದರು. ಕೆ.ಎಸ್.ಮಂಜುನಾಥ್, ತಿಮ್ಮಯ್ಯ, ಶ್ರೇಯಸ್‌ಕುಮಾರ್ ಮತ್ತಿತರಿದ್ದರು.
ಕಡೂರು ಹೊರವಲಯದಲ್ಲಿರುವ ಪುರಸಭೆ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಜಿಲ್ಲಾಧಿಕಾರಿ ಭಂವರ್‌ಸಿಂಗ್ ಮೀನಾ ಭೇಟಿ ನೀಡಿದರು. ಕೆ.ಎಸ್.ಮಂಜುನಾಥ್, ತಿಮ್ಮಯ್ಯ, ಶ್ರೇಯಸ್‌ಕುಮಾರ್ ಮತ್ತಿತರಿದ್ದರು.
Published on
ಕಡೂರು: ಪಾರಂಪರಿಕ ತ್ಯಾಜ್ಯ ನಿರ್ವಹಣೆ ಪ್ರಮಾಣವನ್ನು ಹೆಚ್ಚಿಸಿ ತ್ವರಿತಗತಿಯಲ್ಲಿ ಸಂಸ್ಕರಣೆಗೆ ಅಗತ್ಯಕ್ರಮ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಜಿಲ್ಲಾಕಾರಿ ಭಂವರ್ ಸಿಂಗ್ ಮೀನಾ ಹೇಳಿದರು.
ಕಡೂರು ಪುರಸಭೆಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಘಟಕದ ಕಾರ್ಯವೈಖರಿ ಹಾಗೂ ತ್ಯಾಜ್ಯ ಸಂಸ್ಕರಣಾ ಪ್ರಕ್ರಿಯೆಯನ್ನು ಪರಿಶೀಲಿಸಿ, ಘನತ್ಯಾಜ್ಯ ನಿರ್ವಹಣಾ ನಿಯಮಾವಳಿಗಳ ಅನುಸಾರ ತ್ಯಾಜ್ಯ ಸಂಸ್ಕರಣೆ ಘಟಕದ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಿ ಕೊಳ್ಳುವಂತೆ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ನಡೆಸುವಂತೆ ಸಲಹೆ ನೀಡಿದರು.
ಘಟಕದಲ್ಲಿರುವ ಮಟೀರಿಯಲ್ ರಿಕವರಿ ೆಸಿಲಿಟಿ (ಎಂಅರ್‌ಎ್), ತ್ಯಾಜ್ಯ ವಿಂಗಡಣೆ ಯಂತ್ರೋಪಕರಣಗಳು, ಹಸಿತ್ಯಾಜ್ಯ ಸಂಸ್ಕರಣ ಘಟಕಗಳನ್ನು ವೀಕ್ಷಿಸಿದರು. ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಪರಿಸರ ಇಂಜಿನಿಯರ್ ಶ್ರೇಯಸ್ ಕುಮಾರ್, ಜಗದೀಶ್, ತಿಮ್ಮಯ್ಯ, ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಮೂರ್ತಿ ಹಾಗೂ ಘನತ್ಯಾಜ್ಯ ನಿರ್ವಹಣಾ ಘಟಕದ ಸಿಬ್ಬಂದಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net