

ಪ್ರಮುಖ ಮುಖ್ಯಾಂಶಗಳು
ಕುವೆಂಪು ವಿಶ್ವವಿದ್ಯಾಲಯದ ಸಹಕಾರದಿಂದ ಪಿಜಿ ಕೇಂದ್ರದಲ್ಲಿ ಸೌಕರ್ಯ ಒದಗಿಸಲು ಒತ್ತು ಕೊಡಲಾಗಿದೆ. ಈಗಾಗಲೇ ಪಿಜಿ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ಗೇಟ್‌ವರೆಗೆ ಸಂಪರ್ಕ ಕಲ್ಪಿಸಲು ಎಲೆಕ್ಟ್ರಿಕ್ ವಾಹನ ನೀಡಲಾಗಿದೆ. ಜನರೇಟರ್ ಸಮಸ್ಯೆ ಸರಿಪಡಿಸಲಾಗಿದೆ. ಹಂತ ಹಂತವಾಗಿ ಸುಧಾರಣೆ ಕೈಗೊಳ್ಳಲಾಗುವುದು.
ಕಡೂರಿನ ಸ್ನಾತಕೋತ್ತರ ಕೇಂದ್ರದಲ್ಲಿರುವ ಕೊರತೆ ನೀಗಿಸಿ ಒಂದಷ್ಟು ಸುಧಾರಣೆ ತರಲು ಚಿಂತನೆ ನಡೆಸಲಾಗಿದೆ. ಅಗತ್ಯ ಸೌಕರ್ಯ ಒದಗಿಸಲು ತಿರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಯಾವುದೇ ಕಾರಣಕ್ಕೂ ಸ್ನಾತಕೋತ್ತರ ಕೇಂದ್ರವನ್ನು ವರ್ಗಾಯಿಸುವುದಿಲ್ಲ