ಪ್ರಜಾಪ್ರಭುತ್ವ ಪಕ್ಷ ಕರ್ನಾಟಕ ಅಸ್ಥಿತ್ವಕ್ಕೆ

ಪ್ರಜಾಪ್ರಭುತ್ವ ಪಕ್ಷದ ರಾಜ್ಯಾಧ್ಯಕ್ಷ ಎಚ್.ಜಿ.ರಾಜ್‌ಪ್ರಶಾಂತ್
ಪ್ರಜಾಪ್ರಭುತ್ವ ಪಕ್ಷದ ರಾಜ್ಯಾಧ್ಯಕ್ಷ ಎಚ್.ಜಿ.ರಾಜ್‌ಪ್ರಶಾಂತ್
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ಮಾಡುವ ಉದ್ದೇಶ
  • ಪ್ರಜಾಪ್ರಭುತ್ವ ಪಕ್ಷ ಅಸ್ಥಿತ್ವಕ್ಕೆ
ಚಿಕ್ಕಮಗಳೂರು: ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ಮಾಡುವ ಸದುದ್ದೇಶದೊಂದಿಗೆ ಪ್ರಜಾಪ್ರಭುತ್ವ ಪಕ್ಷ ಕರ್ನಾಟಕ ಎಂಬ ನೂತನ ಪಕ್ಷ ಸ್ಥಾಪಿಸಿದ್ದು ಬದಲಾವಣೆಗಾಗಿ ನಮ್ಮ ಪಕ್ಷವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಜಿ.ರಾಜ್‌ಪ್ರಶಾಂತ್ ಮನವಿ ಮಾಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸಿದ್ದಾಂತದ ತಳಹದಿಯಲ್ಲಿ ಪಕ್ಷ ಕಟ್ಟುತ್ತಿದ್ದೇವೆ. ಅದರಲ್ಲಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ. ಉಳಿದಂತೆ ಯುವ ಜನತೆಗೆ ಉದ್ಯೋಗ ಸೃಷ್ಟಿ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನಮ್ಮ ಎರಡನೆ ಗುರಿಯಾಗಿದೆ. ಕರ್ನಾಟಕ ರಾಜ್ಯದ ಪ್ರತಿ ತಾಲೂಕಿನಲ್ಲಿಯೂ ಖಾಸಗಿ ಶಾಲಾ ಕಾಲೇಜು ಮಾದರಿಯಲ್ಲಿ ಸರಕಾರಿ ಶಾಲೆಗಳಲ್ಲಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು, ಅತ್ಯಾಧುನಿಕ ಕಟ್ಟಡಗಳ ನಿರ್ಮಾಣ, ನುರಿತ ಉಪನ್ಯಾಸಕರು ಮತ್ತು ಎಲ್ಲ ಮೂಲ ಸೌಕರ್ಯ ಕಲ್ಪಿಸುವ ಕನಸು ಕಂಡಿದ್ದೇವೆ ಎಂದರು.
ರಾಜ್ಯದ ಪ್ರತಿ ತಾಲೂಕಿನಲ್ಲೂ ಉಚಿತ ಮತ್ತು ಸುಸಜ್ಜಿತ ಆರೋಗ್ಯಸೇವೆ ನೀಡುವುದು ನಮ್ಮ ಪಕ್ಷದ ಪ್ರಮುಖ ಉದ್ದೇಶವಾಗಿದೆ. ಕೊನೆಯದಾಗಿ ಜಾತಿ, ಲಿಂಗ, ಧರ್ಮ, ಬಣ್ಣ ಮತ್ತು ಆರ್ಥಿಕ ಸ್ಥಿತಿಯ ಬೇಧ ಭಾವ ಇಲ್ಲದೆ ಕಾನೂನಿನ ಮುಂದೆ ಎಲ್ಲರಿಗೂ ಸಮಾನ ಹಕ್ಕು, ಅವಕಾಶ ಹಾಗೂ ಗೌರವವನ್ನು ಒದಗಿಸುವುದು ಪಕ್ಷದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯದರ್ಶಿ ಪೂರ್ಣೇಶ್, ಉಪಾಧ್ಯಕ್ಷ ಶಂಕರ್, ಖಜಾಂಚಿ ಅಭಿ, ಸದಸ್ಯ ಶಿವಣ್ಣ, ಚಂದ್ರು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net