ಸಂಘದ ಮಾಜಿ ಅಧ್ಯಕ್ಷ ಕೆಲವಳ್ಳಿ ಗುಂಡಪ್ಪ ಮಾತನಾಡಿ, ಸರ್ಕಾರಿ ಪ್ರದೇಶವನ್ನು ಪ್ರಾಸ್ತಾವಿಕ 4(1)ಅರಣ್ಯ ನಕಾಶೆಯನ್ನು ತಯಾರಿಸಿದ್ದು, ಈ ಪ್ರದೇಶಗಳನ್ನು ಮೀಸಲು ಅರಣ್ಯವೆಂದು ೋಷಣೆ ಮಾಡುವಾಗ ರೈತರು, ಕೃಷಿ ಕಾರ್ಮಿಕರು ಮುಂತಾದವರ ಕೃಷಿ ಸಾಗುವಳಿ ಭೂಮಿ ಹಾಗೂ ವಾಸವಿರುವ ಮನೆಯನ್ನು ಬಿಟ್ಟು ಮೀಸಲು ಅರಣ್ಯದಿಂದ ಹೊರತುಪಡಿಸಿ ಅರಣ್ಯ ನಕಾಶೆ ತಯಾರಿಸಬೇಕು ಎಂದು ತಿಳಿಸಿದರು.