ನಂತರ ಗ್ರಾಮಸ್ಥರು ಮಾತನಾಡಿ, ಗುಡ್ಡಿಕೆರೆ, ಸಿದ್ಧನಕೊಡಿಗೆ, ಟಂಕಬೈಲು, ಕೋಡಿಗಳ್ಳ ಗ್ರಾಮಗಳಲ್ಲಿ ಅಡಿಕೆ, ತೆಂಗು, ಬಾಳೆ ಹಾಗೂ ನಾಟಿ ಮಾಡಿದ ಭತ್ತದ ಗದ್ದೆಯನ್ನು ಕಾಡಾನೆ ತುಳಿದು, ಸಸಿ ತಿಂದು ಧ್ವಂಸ ಮಾಡಿದೆ. ಒಂದು ತಿಂಗಳಿಂದ ಒಂಟಿ ಆನೆ ಗ್ರಾಮಗಳಲ್ಲಿ ಸುತ್ತಾಡುತ್ತಿದೆ. ಒಂಟಿ ಸಲಗ ಹಿಡಿಯುವ ಕುರಿತು ಭರವಸೆ ನೀಡಬೇಕು. ಇಲ್ಲದಿದ್ದರೆ ಆಹೋರಾತ್ರಿ ಧರಣಿ ನಡೆಸುತ್ತೇವೆ. ಮುಂಬರುವ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.