ಕನ್ನಡ ಉಳಿದರೆ ಮಾತ್ರ ಸಂಸ್ಕೃತಿ ಉಳಿವು

ಆಲ್ದೂರು ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು  ಸೂರಿ ಶ್ರೀ ನಿವಾಸ್ ಉದ್ಘಾಟಿಸಿದರು. ಸುರೇಶ್, ಇಬ್ರಾಹಿಂ, ನೂರ್ ಮಹಮದ್ , ವೆಂಕಟೇಶ್, ನಿರ್ಮಲ ಲಕ್ಷ್ಮಣ್ ಇದ್ದರು.
ಆಲ್ದೂರು ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸೂರಿ ಶ್ರೀ ನಿವಾಸ್ ಉದ್ಘಾಟಿಸಿದರು. ಸುರೇಶ್, ಇಬ್ರಾಹಿಂ, ನೂರ್ ಮಹಮದ್ , ವೆಂಕಟೇಶ್, ನಿರ್ಮಲ ಲಕ್ಷ್ಮಣ್ ಇದ್ದರು.
Published on
ಆಲ್ದೂರು: ಕನ್ನಡ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಆಲ್ದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ 2500 ವರ್ಷಗಳ ಇತಿಹಾಸ ಹೊಂದಿದ್ದು, ನಮ್ಮ ಜೀವನ ಕಟ್ಟಿಕೊಳ್ಳಲು ಬೇರೆ ಭಾಷೆಗಳು ಅವಶ್ಯಕ. ಉನ್ನತ ವ್ಯಾಸಾಂಗ ಮಾಡಿ ಬೇರೆ ದೇಶಗಳಿಗೆ ಹೋದಾಗ ಬೇರೆ ಭಾಷೆಗಳು ಅನಿವಾರ್ಯವಾಗುತ್ತದೆ.ಕನ್ನಡ ಭಾಷೆಯ ಜೀವಂತಿಕೆ ಉಳಿಸಿ ಬೆಳಸಿದಾಗ ಮಾತ್ರ ಅದರ ಶ್ರೀಮಂತಿಕೆ ಹೆಚ್ಚುತ್ತದೆ ಎಂದರು.
ಇಂಗ್ಲಿಷ್ ಭಾಷೆಯಲ್ಲಿ ಓದಿದ ಮಕ್ಕಳು ಮಾತ್ರ ಬುದ್ದಿವಂತರು ಎಂಬುವುದು ತಪ್ಪು ಕಲ್ಪನೆಯಾಗಿದೆ. ಗ್ರಾಮಾಂತರ ಭಾಷೆಯಲ್ಲಿ ಓದಿದ ಮಕ್ಕಳು ಹಿರಿಯರಿಗೆ, ಕಿರಿಯರಿಗೆ ಗೌರವ ಕೊಡುವ ಜತೆಗೆ ಸಂಸ್ಕಾರ ಬಗ್ಗೆ ಹೆಚ್ಚು ಒಲವು ತೋರುತ್ತಾರೆ ಎಂದರು.
ತಾಲೂಕು ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ ಮಾತನಾಡಿ, ಕುವೆಂಪು ಅವರು ಹುಟ್ಟಿದ್ದು ನಮ್ಮ ಜಿಲ್ಲೆಯಲ್ಲಿ, ಬೆಳೆದಿದ್ದು ಮಾತ್ರ ಹುಬ್ಬಳಿಯಲ್ಲಿ. ರಾಮಾಯಣ ದರ್ಶನಂ ಬರೆದ ಮಹಾಕವಿ ಇವರು ನಮ್ಮ ಜಿಲ್ಲೆಗೆ ಹೆಮ್ಮೆ. ಕನ್ನಡದಲ್ಲಿ ಹೆಚ್ಚು ಪ್ರಶಸ್ತಿ ಪಡೆದ ಇವರ ಬಗ್ಗೆ ಮಕ್ಕಳು ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ, ಕನ್ನಡಕ್ಕೆ ವೈಚಾರಿಕ ನೆಲೆಗಟ್ಟು ಹಾಕಿಕೊಡುವ ಮೂಲಕವಾಗಿ ಕನ್ನಡ ನಾಡಿಗೆ ಮಾತ್ರವಲ್ಲದೆ ವಿಶ್ವಕ್ಕೆ ಮನುಕುಲಕ್ಕೆ ಮೌಲ್ಯಯುತ ಸಂದೇಶ ನೀಡಿದರು. ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಷ್ಟ್ರಕವಿ ಬಿರುದುಗಳನ್ನು ಪಡೆದು ಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಹೆಚ್.ಐ. ನೂರ್ ಮಹಮದ್, ಎಸ್‌ಡಿಎಂಸಿ ಅಧ್ಯಕ್ಷ ಎ.ಯು .ಇಬ್ರಾಹಿಂ, ಮುಖ್ಯಶಿಕ್ಷಕ ಸಿ.ಎಸ್. ಸುರೇಶ್, ವಿಜಯಲಕ್ಷ್ಮಿ ವಿಶ್ವನಾಥ್, ನಿರ್ಮಲ ಲಕ್ಷ್ಮಣ್, ನವರಾಜು, ಹರೀಶ್, ಜಯಹೂವೇಗೌಡ ಎ.ಎಸ್.ಮುಜಾಮಿಲ್, ಜ್ಯೋತಿ, ನಯನಾ, ಈರಯ್ಯ ಹಿರೇಮಠ್, ವಿಶಾಲಾಕ್ಷಿ, ಶ್ಯಾಮಲ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net