ಪತ್ತಿನ ಸಹಕಾರ ಸಂಘಕ್ಕೆ ರೂ.12.48 ಲಕ್ಷ ಲಾಭ (sahakara sangha)

ತರೀಕೆರೆ ಶ್ರೀ ಗುರು ಸಿದ್ಧರಾಮೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಎಸ್.ಎಂ.ನಾಗರಾಜ್ ಉದ್ಘಾಟಿಸಿದರು. ಎಲ್.ಎಸ್.ಬಸಪ್ಪ, ಎನ್.ಎಚ್.ಜಗದೀಶ್, ವೈ.ಸಿ.ಮಹೇಶ್ವರಪ್ಪ, ಎಂ.ಎಸ್.ಪ್ರಭುಕುಮಾರ್, ಎಚ್.ಎಸ್.ಬಸವರಾಜಪ್ಪ ಇತರರಿದ್ದರು.
ತರೀಕೆರೆ ಶ್ರೀ ಗುರು ಸಿದ್ಧರಾಮೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಎಸ್.ಎಂ.ನಾಗರಾಜ್ ಉದ್ಘಾಟಿಸಿದರು. ಎಲ್.ಎಸ್.ಬಸಪ್ಪ, ಎನ್.ಎಚ್.ಜಗದೀಶ್, ವೈ.ಸಿ.ಮಹೇಶ್ವರಪ್ಪ, ಎಂ.ಎಸ್.ಪ್ರಭುಕುಮಾರ್, ಎಚ್.ಎಸ್.ಬಸವರಾಜಪ್ಪ ಇತರರಿದ್ದರು.
Published on
ತರೀಕೆರೆ: ಶ್ರೀ ಗುರು ಸಿದ್ಧರಾಮೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು ಶೇ.5ರಷ್ಟು ಜನರ ಹೊರತಾಗಿ ಉಳಿದವರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರುವುದರಿಂದ ಸಂಘ ಪ್ರಗತಿಯತ್ತ ದಾಪುಗಾಲಿಟ್ಟಿದೆ ಎಂದು ಅಧ್ಯಕ್ಷ ಎಸ್.ಎಂ.ನಾಗರಾಜ್ ಹೇಳಿದರು.
ಭಾನುವಾರ ಏರ್ಪಡಿಸಿದ್ದ ಶ್ರೀ ಗುರು ಸಿದ್ಧರಾಮೇಶ್ವರ ಪತ್ತಿನ ಸಹಕಾರ ಸಂಘದ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಪಟ್ಟಣದಲ್ಲಿ ನಾಲ್ಕು ವರ್ಷಗಳ ಹಿಂದೆ ಶಾಖೆ ಆರಂಭಿಸಿದ ಶ್ರೀ ಗುರು ಸಿದ್ಧರಾಮೇಶ್ವರ ಸಹಕಾರ ಸಂಘ 964 ಷೇರುದಾರರನ್ನು ಹೊಂದಿದ್ದು 2025-26ನೇ ಸಾಲಿನಲ್ಲಿ 18.83 ಕೋಟಿ ರೂ. ವಹಿವಾಟು ನಡೆಸಿ 12.48 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಒಟ್ಟು 3.25 ಕೋಟಿ ರೂ. ಠೇವಣಿಯೊಂದಿಗೆ ವಾಹನ, ಬಂಗಾರ ಅಡಮಾನ, ಠೇವಣಿ ಆಧಾರ, ಜಾಮೀನು ಸೇರಿ ಇತರ ಉದ್ದೇಶದ ಸಲುವಾಗಿ 2.94 ಕೋಟಿ ರೂ. ಸಾಲ ನೀಡಿದೆ. ಪಿಗ್ಮಿ ಮೂಲಕವೇ ಸಂಘ 1.26 ಕೋಟಿ ರೂ.ಸಂಗ್ರಹಿಸಿ ಪಿಗ್ಮಿದಾರರಿಗೆ 55 ಲಕ್ಷ ರೂ. ಸಾಲ ವಿತರಿಸಿದೆ. ಅಲ್ಲದೆ 30 ಮಹಿಳಾ ಸ್ವಸಹಾಯ ಗುಂಪುಗಳಿಗೆ 56 ಲಕ್ಷ ರೂ. ಸಾಲ ನೀಡಿ ಮಹಿಳೆಯರನ್ನು  ಸಬಲೀಕರಣಗೊಳಿಸುವ ಪ್ರಯತ್ನ ಮಾಡಿದೆ ಎಂದರು.
ಶ್ರೀ ಗುರು ಸಿದ್ಧರಾಮೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಲ್.ಎಸ್.ಬಸಪ್ಪ, ನಿರ್ದೇಶಕರಾದ ಎನ್.ಎಚ್.ಜಗದೀಶ್, ವೈ.ಸಿ.ಮಹೇಶ್ವರಪ್ಪ, ಬಿ.ಎಸ್.ಮಲ್ಲಿಕಾರ್ಜುನ್, ಎಂ.ಎಸ್.ಪ್ರಭುಕುಮಾರ್, ಎಚ್.ಎಸ್.ಬಸವರಾಜಪ್ಪ, ಆರ್.ಶಿವಮೂರ್ತಿ, ಎಂ.ಎಸ್.ಜಗದೀಶ್, ಶಾರದಾ, ಸುಜಾತಾ, ಸಿಇಒ ಕೆ.ಎನ್.ಅರುಣ್‌ಕುಮಾರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net