ಮಸೀದಿಕೆರೆಯ ಮುಖ್ಯರಸ್ತೆಯ ಮೇಲೆ ಹಸುವಿನ ತಲೆ ಬಿದ್ದಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹಸುವಿನ ಕಡಿದ ತಲೆ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಕಿಡಿಗೇಡಿಗಳು ಮಾಂಸಕ್ಕಾಗಿ ಹಸುವನ್ನು ಕಡಿದು ತಲೆಯನ್ನು ಮುಖ್ಯರಸ್ತೆಯಲ್ಲಿ ಎಸೆದು ಹೋಗಿರುವ ಶಂಕೆಯಿದ್ದು, ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚುವುದಾಗಿ ಪಿಎಸ್‌ಐ ಅಂಬರೀಷ್ ತಿಳಿಸಿದ್ದಾರೆ. ಘಟನೆ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಾಗಿದೆ. ಕಳೆದ ಎರಡು ವಾರಗಳಲ್ಲಿ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಸಾಕಿದ್ದ ಗೋವುಗಳು ಮೇಯಲು ಬಿಟ್ಟ ಬಳಿಕ ಮನೆಗೆ ಬಾರದೆ ಇದ್ದು, ಗೋ ಕಳ್ಳರ ಕೃತ್ಯವೇ ಆಗಿದೆ ಎಂದು ಮಾಲೀಕರು ಶಂಕಿಸಿದ್ದಾರೆ.