1.86 ಕೋಟಿ.ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ

ಗೋರಿಗುಡ್ಡದ ಮಣ್ಣು ಜರಿದ ಸ್ಥಳಕ್ಕೆ  ಶಾಸಕ  ಟಿ.ಡಿ.ರಾಜೇಗೌಡ ಭೇಟಿ ನೀಡಿದರು.
ಗೋರಿಗುಡ್ಡದ ಮಣ್ಣು ಜರಿದ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿದರು.
Published on
ಶೃಂಗೇರಿ: ಮಳೆ ಹೆಚ್ಚಾಗಿ ಗೋರಿಗುಡ್ಡದ ಮಣ್ಣು ಜರಿದು ಕೆಳಗೆ ವಾಸ ಮಾಡುವರಿಗೆ, ವ್ಯಾಪಾರಸ್ಥರಿಗೆ ಹಾಗೂ ಮೇಲ್ಭಾಗದಲ್ಲಿ ಇರುವ ತಾಲೂಕು ಕಚೇರಿ, ನ್ಯಾಯಾಲಯ ಕಟ್ಟಡಗಳಿಗೆ ಹಾನಿಯಾಗಬಹುದು ಎಂಬ ದೃಷ್ಟಿಯಿಂದ 1.86ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ತಾಲೂಕು ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ತಡೆಗೋಡೆ ಕುಸಿತ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿ, ತಡೆಗೋಡೆ ನಿರ್ಮಿಸುವಾಗ ವಿವಿಧ ಇಲಾಖೆ ಇಂಜಿನಿಯರ್ ಹಾಗೂ ತಂತ್ರಜ್ಞರಿಂದ ಮಾಹಿತಿ ಪಡೆದು ನಿರ್ಮಿಸಲಾಗಿದೆ. ಬೆಂಗಳೂರಿನಿಂದ ತಡೆಗೋಡೆ ನಿರ್ಮಾಣದಲ್ಲಿ ಕಾಮಗಾರಿ ನಿರ್ಮಿಸಿದವರ ತಪ್ಪು ಕಂಡಲ್ಲಿ ಅದರ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಆದೇಶ ನೀಡಲಾಗಿದೆ ಎಂದರು.
ಈಗಾಗಲೇ ಸರ್ಕಾರ ವಿಶೇಷ ತಾಂತ್ರಿಕ ಸಮಿತಿ ನೇಮಕ ಮಾಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ. ತಜ್ಞರ ವರದಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಕೆಳಗಡೆ ವಾಸ ಮಾಡುತ್ತಿರುವರಿಗೆ ಹಾಗೂ ವ್ಯಾಪಾರಸ್ಥರನ್ನು ಅಪಾಯ ಜಾಗದಿಂದ ಸ್ಥಳಾಂತರಿಸಲಾಗಿದೆ. ತಡೆಗೋಡೆ ನಿರ್ಮಾಣದಲ್ಲಿ ಲೋಪಕಂಡು ಬಂದಲ್ಲಿ ಅದನ್ನು ಸುಸ್ಥಿತಿಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ವಿರೋಧ ಪಕ್ಷದವರ ಪ್ರತಿಭಟನೆಯನ್ನು ನಾವು ಸ್ವಾಗತಿಸಿದ್ದು, ಇದರಲ್ಲಿ ರಾಜಕಾರಣ ಸಲ್ಲದು. ಕಾಮಾಲೆ ಇದ್ದವರ ಕಣ್ಣಿಗೆ ಎಲ್ಲವೂ ಹಳದಿ ಬಣ್ಣ ಕಾಣಿಸುತ್ತದೆ. ಅವರ ಕಾಲದಲ್ಲಿ ಮಾಡಿದಷ್ಟು ಭ್ರಷ್ಟಚಾರ ನಾನು ಮಾಡಿಲ್ಲ. ನಾನು ಶಾಸಕನಾದ ನಂತರ ಭ್ರಷ್ಟಚಾರ ಮಾಡಿದ್ದರೆ ಅದನ್ನು ದೂಷಿಸುವರು ಸಾಬೀತು ಪಡೆಸಬೇಕು ಎಂದು ಸವಾಲು ಹಾಕಿದರು.
ಸಭೆಗೂ ಮುನ್ನ ತಡೆಗೋಡೆ ಹಾನಿಗೊಳಗಾದ ಸ್ಥಳವನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ಪರಿಶೀಲನೆ ಮಾಡಿದರು. ತಹಸೀಲ್ದಾರ್ ಅನುಪ್ ಸಂಜೋಗ್, ಇಒ ಸುದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗಡೆ, ಮಾರನ ಕೊಡಿಗೆ ನಟರಾಜ್, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net