ಅಖಂಡ ರಾಷ್ಟ್ರಕ್ಕೆ ಸಂವಿಧಾನದ ರಕ್ಷಣೆ

ಕಡೂರು ಅಂಬೇಡ್ಕರ್ ಭವನದಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಇಕ್ಬಾಲ್, ಕಲ್ಲೇಶ್, ಮಂಜಪ್ಪ ಇತರರಿದ್ದರು.
ಕಡೂರು ಅಂಬೇಡ್ಕರ್ ಭವನದಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಇಕ್ಬಾಲ್, ಕಲ್ಲೇಶ್, ಮಂಜಪ್ಪ ಇತರರಿದ್ದರು.
Published on

ಕಡೂರು: ಭಾರತದ ಅಖಂಡತೆ ಕಾಪಾಡುವಲ್ಲಿ ಸಂವಿಧಾನದ ಪಾತ್ರ ಮಹತ್ತರ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಂವಿಧಾನವನ್ನು ಗೌರವಿಸುವುದು ಪ್ರತಿ ಪ್ರಜೆಯ ಕರ್ತವ್ಯ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಭಾರತೀಯರೆಲ್ಲರೂ ನೆಮ್ಮದಿ, ಸಾಮರಸ್ಯದ ಬದುಕು ನಡೆಸಲು ಸಂವಿಧಾನದಿಂದ ಸಾಧ್ಯವಾಗಿದೆ. ಅಂಬೇಡ್ಕರ್ ಅವರು ದೇಶಕ್ಕೆ ಸಮರ್ಪಿಸಿದ ಸಂವಿಧಾನ ರಾಷ್ಟ್ರಕ್ಕೆ ಸುಭದ್ರ ಬುನಾದಿ ಹಾಕಿದೆ. ವಿವಿಧ ರಾಷ್ಟ್ರಗಳಲ್ಲಿ ಅಜಾಗರೂಕತೆಯಿಂದ ಗಲಭೆಗಳು ಉಂಟಾಗಿ ರಾಷ್ಟ್ರವೇ ಅಧೋಗತಿಗೆ ತಲುಪುತ್ತಿವೆ. ಭಾರತದಲ್ಲಿ ಮಾತ್ರ ಅಂಥ ಪರಿಸ್ಥಿತಿ ನಿರ್ಮಾಣವಾಗದಂತೆ ಸಂವಿಧಾನ ರಚಿಸಲಾಗಿದೆ ಎಂದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಿಧಾನದ ಪೀಠಿಕೆಯ ಸಾಕ್ಷೃಚಿತ್ರಗಳೊಂದಿಗೆ ಅಂಬೇಡ್ಕರ್ ಭವನದವರೆಗೆ ಜಾಥಾ ನಡೆಸಲಾಯಿತು. ಸಾರ್ವಜನಿಕವಾಗಿ ಸಂವಿಧಾನದ ಪೀಠಿಕೆ ಓದುವ ಮೂಲಕ ಸಂವಿಧಾನದ ಆಶಯಗಳಿಗೆ ಗೌರವ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸನಾವುಲ್ಲಾ ಉಪನ್ಯಾಸ ನೀಡಿದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಆಸಂಧಿ ಕಲ್ಲೇಶ್, ಶರತ್ ಕೃಷ್ಣಮೂರ್ತಿ, ಇಕ್ಬಾಲ್, ಟಿ.ಮಂಜಪ್ಪ, ಕೃಷ್ಣಪ್ಪ, ಚಂದ್ರಶೇಖರ್, ಕೆ.ವಿ.ಮಂಜುನಾಥ್, ಎನ್.ಗಿರೀಶ್, ಕುಂಕನಾಡು ಮಂಜುನಾಥ್, ವಾಸು, ಎಂ.ಪ್ರಕಾಶ್ ನಾಯ್ಕ, ನಟರಾಜ್, ದೇವರಾಜ್, ತಿಮ್ಮಪ್ಪ, ಬಸವರಾಜ್ ನಾಯ್ಕ, ಕೆ.ಎಸ್.ಮಂಜುನಾಥ್, ಜಿ.ಪ್ರಕಾಶ್, ಪ್ರಸನ್ನ, ರಾಜು ಒಡೆಯರ್, ನಿತ್ಯಾನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net