ಕಾಂಗ್ರೆಸ್ ಮುಖಂಡ ಎಂ.ಎಚ್.ನಟರಾಜ್ ಮಾತನಾಡಿ, 2023ರ ಮತಎಣಿಕೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಒಟ್ಟು 12 ಅಭ್ಯರ್ಥಿಗಳ ಏಜೆಂಟರ್‌ಗಳ ಸಮ್ಮುಖದಲ್ಲಿ 569 ಅಂಚೆ ಮತಗಳು ಸಿಂಧು ಎಂದು ಚುನಾವಣಾಧಿಕಾರಿ ಎಣಿಕೆ ಮಾಡಿ ಟಿ.ಡಿ.ರಾಜೇಗೌಡರು 201ಮತಗಳಿಂದ ಜಯಗಳಿಸಿದ್ದಾರೆ ಎಂದು ಘೋಷಿಸಿದ್ದರು. ಎಣಿಕೆ ಮಾಡುವಾಗ ವೀಡಿಯೋ ಚಿತ್ರೀಕರಣ ಸಹ ಮಾಡಲಾಗಿತ್ತು. ಆಗ ಸಿಂಧು ಆಗಿದ್ದ ಮತ, ಈಗ ಅಸಿಂಧು ಆಗಿರುವುದು ಹೇಗೆ.