ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ

ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ
  • ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ
ಚಿಕ್ಕಮಗಳೂರು: ಆಳಂದದ ಕೇಸ್ ವಾಪಾಸ್ ಪಡೆಯುವುದು, ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿರುವುದು ಮತ್ತು ಮುಸ್ಲಿಂ ಅಭಿವೃದ್ಧಿಗೆ ೬೦೦ ಕೋಟಿ ರೂ. ಅನುದಾನ ನೀಡಿರುವುದು ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ತಂತ್ರವಾಗಿದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯ ಉಪ ಚುನಾವಣೆ ಬಳಿಕ ಮುಸ್ಲಿಂ ಮುಖಂಡರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ತಣ್ಣಗಾಗಿಸುವ ಸಲುವಾಗಿ ರಾಜ್ಯ ಸರ್ಕಾರ ಮುಸ್ಲಿಂ ಓಲೈಕೆ ಮಾಡುತ್ತಿದೆ ಎಂದು ದೂರಿದರು.
ಶ್ರೀರಾಮ ಸೇನೆ ಸಂಘಟನೆಯಿAದ ಕಲಬುರಗಿಯ ಆಳಂದ ಕೇಸ್ ವಾಪಾಸ್ ಪಡೆದಿರುವ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸರ್ಕಾರದ ತೀರ್ಮಾನವನ್ನು ರದ್ದುಪಡಿಸುವಂತೆ ಕೋರುತ್ತೇವೆ ಎಂದು ತಿಳಿಸಿದರು.
ರಾಘವ ಚೈತ್ಯನ್ಯ ಪ್ರತಿಷ್ಠಾಪನೆ ಮಾಡಿದ್ದ ಈಶ್ವರ ಲಿಂಗವಿದ್ದು, ಅದನ್ನು ಮುಸ್ಲಿಮರು ಅತಿಕ್ರಮಣ ಮಾಡಿಕೊಂಡು ದರ್ಗಾ ಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಲಿಂಗದ ಮೇಲೆ ಮುಸ್ಲಿಮರು ಮಲಮೂತ್ರ ಮಾಡಿದ್ದರು. ಆಗ ಹಿಂದೂಗಳು ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಸಂಘರ್ಷ ಉಂಟಾಯಿತು. ಮುಸ್ಲಿಂ ಗೂಂಡಾಗಳು ಪೊಲೀಸರ ಮೇಲೆ ದಾಳಿ ಮಾಡಿದ್ದರು. ಜಿಲ್ಲಾಧಿಕಾರಿ ಮತ್ತು ಎಸ್‌ಪಿಯನ್ನು ಅಲ್ಲಿಂದ ಓಡಿಸಿದ್ದರು.
ಆಗ ಮುಸ್ಲಿಂ ಗೂಂಡಾಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ರಾಜ್ಯ ಸರ್ಕಾರ ಆ ಕೇಸ್ ವಾಪಾಸ್ ಪಡೆಯುವ ತೀರ್ಮಾನ ಮಾಡಿದೆ. ಈ ಮೂಲಕ ಪೊಲೀಸರ ಮನೋಬಲ ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಹೀಗಾಗಿ ನ್ಯಾಯಾಲಯದ ಮೋರೆ ಹೋಗುತ್ತೇವೆ. ಸರ್ಕಾರದ ಕ್ರಮವನ್ನು ರದ್ದು ಪಡಿಸುವಂತೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕೇಸರಿ ಶಾಲು ಹಂಚುತ್ತೇವೆ
ರಾಜ್ಯ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಿರುವುದರ ವಿರುದ್ಧ ಜೂನ್ ೧ರಂದು ಶಾಲಾ ಕಾಲೇಜು ಆರಂಭ ಆಗುವ ದಿನ ಕೇಸರಿ ಶಾಲು ಹಂಚಿಕೆ ಮಾಡುತ್ತೇವೆ ಎಂದು ಶ್ರೀರಾಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.
ಹೈಕೋರ್ಟ್ ಹಿಜಾಬ್ ಧಾರ್ಮಿಕ ಭಾಗ ಅಲ್ಲ. ಕುರಾನ್‌ನಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಜತೆಗೆ ಹಿಜಾಬ್ ಅನ್ನು ಎಲ್ಲಿ ಬೇಕಾದರೂ ಧರಿಸಬಹುದು. ಆದರೆ ಶಾಲಾ-ಕಾಲೇಜು ಆವರಣದಲ್ಲಿ ಹಿಜಾಬ್ ತೆಗೆದು ಅಲ್ಲಿಯ ನಿಯಮದ ಪ್ರಕಾರ ಸಮವಸ್ತç ಧರಿಸಬೇಕು ಎಂದು ಹೇಳಿತ್ತು.
ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಈವರೆಗೆ ಯಾವುದೇ ಆದೇಶ ಬಂದಿಲ್ಲ. ಇದರ ಮಧ್ಯೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡುವ ತೀರ್ಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮವಸ್ತçದಲ್ಲಿ ಬೇಧ-ಭಾವ, ಮೇಲು-ಕೀಳು, ಹಿಂದೂ-ಮುಸ್ಲಿA-ಕ್ರಿಶ್ಚಿಯನ್, ಉಚ್ಛ-ನೀಚ ಯಾವುದೂ ಇಲ್ಲ. ಸಮವಸ್ತç ಪದದ ಅರ್ಥ ಮಧು ಬಂಗಾರಪ್ಪಗೆ ಅರ್ಥವಾಗಿಲ್ಲವೇ?. ಹಿಜಾಬ್ ಅವಕಾಶ ನೀಡುವ ಮೂಲಕ ಸಮಾಜದಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಶಿವದಾರ-ಜನಿವಾರ-ರುದ್ರಾಕ್ಷಿ ಹಾಕಬಹುದು ಎಂದು ಹೇಳುತ್ತಿರಾ. ಅದನ್ನು ಹೇಳುವುದಕ್ಕೆ ನೀವು ಯಾರು ಎಂದು ಪ್ರಶ್ನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net