ಕಡೂರು, ಬೀರೂರಲ್ಲಿ ಕಾಂಗ್ರೆಸ್‌ನಿಂದ ಎಸ್‌ಆರ್‌ಐ ಜಾಗೃತಿ

 ಭಂಡಾರಿಶ್ರೀನಿವಾಸ್
ಭಂಡಾರಿಶ್ರೀನಿವಾಸ್
Published on
ಕಡೂರು: ಜನತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಸಧೃಡಗೊಳಿಸಲು ಎಸ್‌ಐಆರ್ ಮಹತ್ತರ ಪಾತ್ರ ವಹಿಸುತ್ತದೆ ಎಂದು ಕಾಂಗ್ರೆಸ್ ಎಸ್‌ಐಆರ್ ಕಡೂರು ಪಟ್ಟಣದ ವೀಕ್ಷಕ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಜೂ.30ರಿಂದ ಜು.29ರವರೆಗೆ ಜಾರಿಯಲ್ಲಿರುತ್ತದೆ. ಈ ಪ್ರಕ್ರಿಯೆಗಳಲ್ಲಿ ಅರ್ಹ ಮತದಾರರು ಸಕ್ರಿಯವಾಗಿ ಭಾಗವಹಿಸುವ ಜತೆಗೆ ಮನೆ ಬಾಗಿಲಿಗೆ ಬರುವ ಬಿಎಲ್‌ಒಗಳ ಜತೆ ಸಮನ್ವಯ ಸಾಧಿಸಿ ಪೂರಕ ದಾಖಲಾತಿಗಳನ್ನು ಒದಗಿಸುವ ಮೂಲಕ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ಸಲ್ಲದ ಗೊಂದಲಗಳನ್ನು ಮುನ್ನಲೆಗೆ ತರುತ್ತಿವೆ. ಸಾರ್ವಜನಿಕರು ಇವುಗಳಿಗೆ ಕಿವಿಗೊಡಬಾರದು. ಎರಡು ಬೇರೆ ಬೇರೆ ಮತಗಟ್ಟೆಗಳಲ್ಲಿ ಹೆಸರುಗಳು ಇದ್ದರೆ ಒಂದು ಕಡೆ ಉಳಿಸಿಕೊಂಡು ಮತ್ತೊಂದು ಕಡೆ ರದ್ದುಪಡಿಸಿಕೊಳ್ಳುವ ಅವಕಾಶವಿರುತ್ತದೆ. ಒಂದು ವೇಳೆ ಇದರ ಬಗ್ಗೆ ಗಮನಹರಿಸದಿದ್ದರೆ ತಮ್ಮ ಮತದಾನದ ಹಕ್ಕು ಮೊಟಕುಗೊಳ್ಳುತ್ತದೆ ಎಂಬ ಅರಿವು ಸಾರ್ವಜನಿಕರಿಗೆ ಇರಬೇಕಿದೆ ಎಂದರು.
ಕೆಪಿಸಿಸಿ ಸೂಚನೆ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ನನಗೆ ಕಡೂರು ಪುರಸಭೆ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹೊಣೆ ನೀಡಿದೆ. ಅದರಂತೆ ಕಡೂರು ಪಟ್ಟಣದ 23 ವಾರ್ಡ್‌ಗಳಲ್ಲೂ ನಾನು ಮತ್ತು ಪಕ್ಷದಿಂದ ನಿಯೋಜನೆಗೊಂಡಿರುವ ಬಿಎಲ್‌ಎ-2 ಅವರೊಂದಿಗೆ ಪ್ರತಿ ವಾರ್ಡ್‌ಗಳ ಮನೆ ಮನೆಗೂ ಬಿಎಲ್‌ಒಗಳು ಭೇಟಿ ನೀಡುತ್ತಿದ್ದಾರೇ ಎಂಬುದನ್ನು ಪರಿಶೀಲಿಸುತ್ತೇವೆ. ಅವರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗರು ಮನೆಯಲ್ಲಿಯೇ ಇದ್ದು, ಅವರು ಕೇಳಬಹುದಾದ ಅಗತ್ಯ ಮಾಹಿತಿಗಳನ್ನು ನೀಡುವಂತೆ ಸಲಹೆ ನೀಡಿದರು.
ಪುರಸಭೆ ಮಾಜಿ ಸದಸ್ಯರಾದ ಈರಳ್ಳಿ ರಮೇಶ್, ಸೈಯಾದ್ ಯಾಸೀನ್, ಇಕ್ಬಾಲ್, ಜ್ಯೋತಿ ಆನಂದ್, ಮುಖಂಡರಾದ ಕೆ.ಎಚ್.ಶಂಕರ್, ಲಕ್ಷ್ಮೀತಿಪ್ಪೇಶ್, ಮರುಗುದ್ದಿ ಮನು, ಕಾಂತರಾಜು, ನಾಗೇಂದ್ರ, ಶ್ರೀನಿವಾಸ್, ಕರಿಬಡ್ಡೆ ರಾಜು ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net