ಚಿಕ್ಕಮಗಳೂರು: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭೀವೃದ್ದಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆ.ಪಿ.ಸತೀಶ್‌ಗೌಡ ಹಾಗೂ ಉಪಾಧ್ಯಕ್ಷರಾಗಿ ಎಲ್.ಆರ್.ಈ ಶ್ವರಪ್ಪ ಅವರಿಗೆ ಬುಧವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ಗೌರವಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ವಕ್ತಾರರಾದ ಹುಣಸೇಮಕ್ಕಿ ಲಕ್ಷö್ಮಣ್, ಕಳವಾಸೆ ರವಿ, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ನಗರಾಧ್ಯಕ್ಷ ಸತೀಶ್, ಮುಖಂಡರಾದ ಹೊನ್ನೇ ಶ್, ಬ್ಯಾಂಕ್ ನಿರ್ದೇಶಕರಾದ ಕೋಟೆ ರಂಗನಾಥ್, ಈಶ್ವರಹಳ್ಳಿ ಮಹೇಶ್, ರವೀಶ್ ಉಪಸ್ಥಿತರಿದ್ದರು.