ಆತ್ಮವಿಶ್ವಾಸ, ಸಹಾನುಭೂತಿ ನಾಯಕನ ಪ್ರಮುಖ ಗುಣ

ಶೃಂಗೇರಿಯಲ್ಲಿ ಆಯೋಜಿಸಿದ್ದ ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಮಂದಾರ ಜೈನ್ ಉದ್ಘಾಟಿಸಿದರು.
ಶೃಂಗೇರಿಯಲ್ಲಿ ಆಯೋಜಿಸಿದ್ದ ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಮಂದಾರ ಜೈನ್ ಉದ್ಘಾಟಿಸಿದರು.
Published on
ಶೃಂಗೇರಿ: ಆತ್ಮವಿಶ್ವಾಸ, ಸ್ಪಷ್ಟ ಸಂವಹನ ಮತ್ತು ಸಹಾನುಭೂತಿ ಒಬ್ಬ ನಾಯಕನಿಗೆ ಇರಬೇಕಾದ ಪ್ರಮುಖ ಗುಣಗಳು. ಇತರರ ಮಾತುಗಳನ್ನು ಆಲಿಸಿ ತನ್ನ ಆಲೋಚನೆಗಳನ್ನು ಸ್ಪಷ್ಟವಾಗಿ ಪ್ರಸ್ತುತ ಪಡಿಸಿದಾಗ ಸಮಾಜದಲ್ಲಿ ಆತನು ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಮಂದಾರ ಜೈನ್ ತಿಳಿಸಿದರು.
ಚಪ್ಪರದಾಂಜನೇಯ ದೇವಾಲಯದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಶೃಂಗೇರಿ ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸವಾಲುಗಳು ಎದುರಾದಾಗ ಧ್ಯೆರ್ಯದಿಂದ ನಿರ್ಧಾರ ತೆಗೆದುಕೊಳ್ಳುವುದು. ತಂಡದ ಸದಸ್ಯರ ಭಾವನೆಗಳನ್ನು ಅರ್ಥೈಸಿಕೊಳ್ಳುವುದು. ಭವಿಷ್ಯದ ಗುರಿಗಳ ಕುರಿತು ಸ್ಪಷ್ಟ ಕಲ್ಪನೆ ಹೊಂದಿ ಸಮಾಜದ ಸರ್ವರ ಶ್ರೇಯಸ್ಸಿಗಾಗಿ ಮಿಡಿಯುವುದು ಒಬ್ಬ ನಾಯಕನಿಗೆ ಇರಬೇಕಾದ ಮಾನವೀಯ ಮೌಲ್ಯಗಳು ಎಂದರು.
ಸಂಘಗಳನ್ನು ನಾವು ಸ್ಥಾಪಿಸಬಹುದು. ಅದನ್ನು ಬೆಳೆಸುವುದು ಸುಲಭದ ಮಾತಲ್ಲ. ನಾಯಕನು ಜಾತಿ, ಮತಗಳ ಬೇಧವನ್ನು ಬದಿಗಿಟ್ಟು ಯಾವುದೇ ಕಾರ್ಯನಿರ್ವಹಿಸಿದ್ದರೂ ಅದನ್ನು ಸದಸ್ಯರ ಜತೆಗೆ ಹಂಚಿಕೊಂಡು ಸಮಾಜದ ಉನ್ನತೀಕರಣಕ್ಕಾಗಿ ನಿರಂತರ ದುಡಿಯುವುದು ಆತನ ಪ್ರಮುಖ ಕರ್ತವ್ಯವಾಗಬೇಕು. ಸಂಘದ ನಾಯಕನ ಜತೆ ಹೊಂದಾಣಿಕೆ, ಸಾಂಕ ಮನೋಭಾವ ಬೆಳೆಸಿಕೊಂಡು ಅವರಿಗೆ ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡುವುದು ಪ್ರಮುಖವಾಗಿದೆ ಎಂದರು.
ತಾಲೂಕಿನ ಯೋಜನಾಧಿಕಾರಿ ಸುರೇಶ್, ಭಕ್ತಂಪುರ ಒಕ್ಕೂಟದ ಸಾಗರ್ ಭಟ್, ಶೃಂಗೇರಿ ವಲಯದ ಮೇಲ್ವಿಚಾರಕ ಬಾಬು.ಕೆ.ಮೆಣಸೆ ವಲಯದ ಮೇಲ್ವಿಚಾರಕ ಮೋಹನ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net