ಜಂಟಿ ಸರ್ವೇ ನಡೆಸಿ ಭೂಮಿ ಹಂಚಿ

ಮೂಡಿಗೆರೆ ಅರಣ್ಯ ಇಲಾಖೆ ಕಚೇರಿಯಲ್ಲಿ ತರುವೆ ಗ್ರಾಮಸ್ಥರು ಡಿಸಿಎಫ್ ಬೋರಯ್ಯಗೆ ಮನವಿ ಸಲ್ಲಿಸಿದರು. ಪೂರ್ಣಿಮಾ, ಸರಿನಾ, ಮಹೇಶ್, ವಿನಂತಿ, ರೇಖಾ, ಸುಜಾತಾ ಇತರರಿದ್ದರು.
ಮೂಡಿಗೆರೆ ಅರಣ್ಯ ಇಲಾಖೆ ಕಚೇರಿಯಲ್ಲಿ ತರುವೆ ಗ್ರಾಮಸ್ಥರು ಡಿಸಿಎಫ್ ಬೋರಯ್ಯಗೆ ಮನವಿ ಸಲ್ಲಿಸಿದರು. ಪೂರ್ಣಿಮಾ, ಸರಿನಾ, ಮಹೇಶ್, ವಿನಂತಿ, ರೇಖಾ, ಸುಜಾತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಇಲಾಖೆ ಕಚೇರಿಯಲ್ಲಿ
  • ಡಿಸಿಎಫ್ ಬೋರಯ್ಯ
ಮೂಡಿಗೆರೆ: ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ನಿವೇಶನರಹಿತರಿಗೆ ಭೂಮಿ ಹಂಚಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿ ಶುಕ್ರವಾರ ತರುವೆ ಗ್ರಾಮದ ನಿವೇಶನರಹಿತ ಫಲಾನುಭವಿಗಳು ಪಟ್ಟಣದ ಅರಣ್ಯ ಇಲಾಖೆ ಕಚೇರಿಯಲ್ಲಿ ಡಿಸಿಎಫ್ ಬೋರಯ್ಯ ಅವರಿಗೆ ಮನವಿ ಸಲ್ಲಿಸಿದರು.
ತರುವೆ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಗಾಗಿ ಸರ್ವೇ ನಂಬರ್ 104ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರವಾಸೋದ್ಯಮ ಇಲಾಖೆ ಜಾಗದ ಪಕ್ಕದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಖಾಲಿ ಜಾಗವಿದೆ. ಅದನ್ನು ನಿವೇಶನರಹಿತರಿಗೆ ಮತ್ತು ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ನೀಡಬೇಕೆಂದು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಜಾಗವನ್ನು ಉಳ್ಳವರ ಪಾಲಾಗದಂತೆ ರಕ್ಷಿಸಬೇಕು. ತರುವೆ ಗ್ರಾಮದ ಸ.ನಂ 106ರಲ್ಲಿ ನಿವೇಶನಕ್ಕಾಗಿ 4 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಆ ಜಾಗದಲ್ಲಿ ಮರಗಳಿರುವುದರಿಂದ ನಿವೇಶನಕ್ಕಾಗಿ ಸ್ಥಳೀಯ ಗ್ರಾಪಂಗೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಅರಣ್ಯ ಇಲಾಖೆ ತಕರಾರಿನಿಂದಾಗಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಗ್ರಾಪಂಗೆ ಸಾಧ್ಯವಾಗುತ್ತಿಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ ನಿವೇಶನರಹಿತರ ನೆರವಿಗೆ ಧಾವಿಸಬೇಕೆಂದು ನಿವೇಶನರಹಿತ ಫಲಾನುಭವಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ. 
 ತರುವೆ ಗ್ರಾಮದ ನಿವೇಶನರಹಿತರಾದ ಪೂರ್ಣಿಮಾ, ಸರಿನಾ, ಕೃಷ್ಣಮೂರ್ತಿ, ಮಹೇಶ್, ಫಾತಿಮಾ, ಲಕ್ಷ್ಮೀ, ವಿನಂತಿ, ಕಮಲಾ, ಗೀತಾ, ಕವಿತಾ, ಲತಾ, ಸನಾವುಲ್ಲಾ, ಪಾರ್ವತಿ, ರೇಖಾ, ಸುಜಾತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net